ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಕ್ವಿಟಿ ಎಫ್‌ಡಿಐ: ಕರ್ನಾಟಕಕ್ಕೆ ಮೊದಲ ಸ್ಥಾನ

Last Updated 28 ಆಗಸ್ಟ್ 2021, 12:52 IST
ಅಕ್ಷರ ಗಾತ್ರ

ನವದೆಹಲಿ: 2021–22ರ ಏಪ್ರಿಲ್‌–ಜೂನ್‌ ಅವಧಿಯಲ್ಲಿ ಈಕ್ವಿಟಿಗಳಲ್ಲಿ ಆಗಿರುವ ಒಟ್ಟಾರೆ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ (ಎಫ್‌ಡಿಐ) ಕರ್ನಾಟಕವು ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮತ್ತು ದೆಹಲಿ ನಂತರದ ಸ್ಥಾನದಲ್ಲಿವೆ.

ಏಪ್ರಿಲ್‌–ಜೂನ್‌ ಅವಧಿಯಲ್ಲಿ ಈಕ್ವಿಟಿ ಎಫ್‌ಡಿಯಗಳಲ್ಲಿ ಒಟ್ಟು ₹ 1.30 ಲಕ್ಷ ಕೋಟಿಗಳಷ್ಟಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ದೇಶದಲ್ಲಿ ಆಗಿದ್ದ ₹ 48,544 ಕೋಟಿ ಹೂಡಿಕೆಗೆ ಹೋಲಿಸಿದರೆ ಈ ಬಾರಿ ಹೂಡಿಕೆಯ ಪ್ರಮಾಣವು ಶೇ 168ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಈಕ್ವಿಟಿ ಹೂಡಿಕೆ, ಗಳಿಕೆಯ ಮರು ಹೂಡಿಕೆ ಮತ್ತು ಮೂಲ ಬಂಡವಾಳದ ಹೂಡಿಕೆಯನ್ನು ಒಟ್ಟಾಗಿ ಪರಿಗಣಿಸಿದರೆ ಎಫ್‌ಡಿಐ ಪ್ರಮಾಣವು 2019–20ರ ಏಪ್ರಿಲ್‌–ಜೂನ್‌ ಅವಧಿಯಲ್ಲಿ ₹ 87,616 ಕೋಟಿಗಳಷ್ಟಿತ್ತು. ಇದು 2021–22ನೇ ಹಣಕಾಸು ವರ್ಷದ ಏಪ್ರಿಲ್‌–ಜೂನ್‌ ಅವಧಿಯಲ್ಲಿ ₹ 1.66 ಲಕ್ಷ ಕೋಟಿಗಳಿಗೆ ಏರಿಕೆ ಆಗಿದೆ.

ಎಫ್‌ಡಿಐ ನೀತಿಯಲ್ಲಿನ ಸುಧಾರಣೆ, ಹೂಡಿಕೆಗೆ ಅನುಕೂಲ ಹಾಗೂ ಸುಲಲಿತ ವಹಿವಾಟು ನಡೆಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಈ ಪ್ರಮಾಣದ ಎಫ್‌ಡಿಐ ಹರಿದುಬಂದಿದೆ ಎಂದು ಸಚಿವಾಲಯ ಹೇಳಿದೆ.

ಅಂಕಿ–ಅಂಶ

ಪ್ರಮುಖ ರಾಜ್ಯಗಳಲ್ಲಿ ಆಗಿರುವ ಹೂಡಿಕೆ (%)

ಕರ್ನಾಟಕ; 48

ಮಹಾರಾಷ್ಟ್ರ;23

ದೆಹಲಿ;11

***

ಯಾವ ವಲಯಗಳಲ್ಲಿ ಹೂಡಿಕೆ? (%)

ವಾಹನ ಉದ್ಯಮ; 27

ಕಂಪ್ಯೂಟರ್ ಸಾಫ್ಟ್‌ವೇರ್‌;17ರಷ್ಟು

ಸೇವಾ ವಲಯ;11

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT