ಶನಿವಾರ, ಫೆಬ್ರವರಿ 27, 2021
30 °C

ಭಾರತಕ್ಕೆ ಎಫ್‌ಡಿಐ ಶೇ 13ರಷ್ಟು ಹೆಚ್ಚಳ: ವಿಶ್ವಸಂಸ್ಥೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: 2020ರಲ್ಲಿ ಭಾರತದಲ್ಲಿ ಆಗಿರುವ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ (ಎಫ್‌ಡಿಐ) ಶೇಕಡ 13ರಷ್ಟು ಏರಿಕೆ ಕಂಡುಬಂದಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಡಿಜಿಟಲ್‌ ವಲಯದಲ್ಲಿ ಎಫ್‌ಡಿಐ ಒಳಹರಿವು ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ತಿಳಿಸಿದೆ.

ಇದೇ ವೇಳೆ, ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಇಂಗ್ಲೆಂಡ್‌, ಅಮೆರಿಕ ಮತ್ತು ರಷ್ಯಾದಂತಹ ಪ್ರಮುಖ ದೇಶಗಳಲ್ಲಿ ಎಫ್‌ಡಿಐ ಒಳಹರಿವು ಇಳಿಕೆಯಾಗಿದೆ ಎಂದೂ ತಿಳಿಸಿದೆ.

ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಕುರಿತ ಸಂಸ್ಥೆ (ಯುಎನ್‌ಸಿಟಿಎಡಿ) ಪ್ರಕಟಿಸಿರುವ ‘ಇನ್‌ವೆಸ್ಟ್‌ಮೆಂಟ್‌ ಟ್ರೆಂಡ್ಸ್‌ ಮಾನಿಟರ್’ ವರದಿ ಪ್ರಕಾರ, ಜಾಗತಿಕವಾಗಿ ಎಫ್‌ಡಿಐ ಒಳಹರಿವು 2020ರಲ್ಲಿ ಶೇ 42ರಷ್ಟು ಇಳಿಕೆ ಕಂಡಿದ್ದು, ₹ 62.70 ಲಕ್ಷ ಕೋಟಿಗಳಷ್ಟಾಗಿರುವ ಅಂದಾಜು ಮಾಡಲಾಗಿದೆ. ‌

2019ರಲ್ಲಿ ಇದು ₹ 109 ಲಕ್ಷ ಕೋಟಿಗಳಷ್ಟಿತ್ತು ಎಂದು ತಿಳಿಸಿದೆ. ಈ ಹಿಂದೆ 1990ರಲ್ಲಿ ಎಫ್‌ಡಿಐ ಒಳಹರಿವು ಕನಿಷ್ಠ ಮಟ್ಟದಲ್ಲಿತ್ತು. 2008–09ರ ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಆಗಿದ್ದ ಹೂಡಿಕೆಗೆ ಹೋಲಿಸಿದರೂ 2020ರಲ್ಲಿ ಶೇ 30ಕ್ಕೂ ಹೆಚ್ಚಿನ ಇಳಿಕೆ ಆಗಿದೆ.

ಹೂಡಿಕೆ ವಿವರ (2020ರಲ್ಲಿ)
ಚೀನಾ;
₹ 11.89 ಲಕ್ಷ ಕೋಟಿ
ಭಾರತ; ₹ 4.16 ಲಕ್ಷ ಕೋಟಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು