ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಐ ಒಳಹರಿವು ಹೆಚ್ಚುತ್ತಲೇ ಇದೆ: ಪೀಯೂಷ್‌ ಗೋಯಲ್‌

Last Updated 15 ಡಿಸೆಂಬರ್ 2020, 21:48 IST
ಅಕ್ಷರ ಗಾತ್ರ

ನವದೆಹಲಿ: ‘ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಅನುಕೂಲಕರವಾದ ನೀತಿಗಳನ್ನು ಹೊಂದಿರುವುದರಿಂದ ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಹೆಚ್ಚಾಗುತ್ತಲೇ ಇದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

‘ಏಪ್ರಿಲ್‌–ಸೆಪ್ಟೆಂಬರ್ ಅವಧಿಯಲ್ಲಿ ಎಫ್‌ಡಿಐ ಪ್ರಮಾಣ ಶೇಕಡ 13ರಷ್ಟು ಹೆಚ್ಚಾಗಿದ್ದು, ₹ 2.96 ಲಕ್ಷ ಕೋಟಿಗಳಷ್ಟಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಕೋವಿಡ್‌–19 ಪ್ರಕರಣಗಳ ಸಂಖ್ಯೆ ಗರಿಷ್ಠ ಮಟ್ಟದಲ್ಲಿ ಇದ್ದ ಸಂದರ್ಭದಲ್ಲಿಯೂ ಎಫ್‌ಡಿಐ ಒಳಹರಿವು ನಿರಂತರವಾಗಿ ಹೆಚ್ಚಾಗಿದೆ. ಜಗತ್ತಿನಲ್ಲಿ ಅತ್ಯಂತ ಅನುಕೂಲಕರ ಎಫ್‌ಡಿಐ ನಿಯಮಗಳನ್ನು ನಾವು ಹೊಂದಿದ್ದೇವೆ’ ಎಂದು ಸಿಐಐ ಆಯೋಜಿಸಿದ್ದ ‘ಪಾಲುದಾರಿಕೆ ಶೃಂಗ – 2020’ರಲ್ಲಿ ತಿಳಿಸಿದ್ದಾರೆ.

ಬಹುತೇಕ ವಲಯಗಳಲ್ಲಿ ಸರ್ಕಾರದ ಒಪ್ಪಿಗೆ ಇಲ್ಲದೆಯೇ ಶೇ 100ರಷ್ಟು ಎಫ್‌ಡಿಐಗೆ ಅವಕಾಶ ನೀಡಲಾಗಿದೆ. ದೂರಸಂಪರ್ಕ, ಮಾಧ್ಯಮ, ಔಷಧ ಮತ್ತು ವಿಮೆಯಂತಹ ವಲಯಗಳಲ್ಲಿ ವಿದೇಶಿ ಹೂಡಿಕೆಗೆ ಸರ್ಕರದ ಒಪ್ಪಿಗೆ ಅಗತ್ಯವಿದೆ. ಲಾಟರಿ ವಹಿವಾಟು, ಜೂಜು ಮತ್ತು ಬೆಟ್ಟಿಂಗ್‌, ಚಿಟ್‌ ಫಂಡ್ಸ್‌, ನಿಧಿ ಕಂಪನಿ, ರಿಯಲ್‌ ಎಸ್ಟೇಟ್‌, ತಂಬಾಕು ಬಳಸಿರುವ ಉತ್ಪನ್ನಗಳನ್ನು ತಯಾರಿಕಾ ವಲಯಗಳಲ್ಲಿ ಎಫ್‌ಡಿಐ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT