ನವದೆಹಲಿ: ರಫ್ತು ಆಧಾರಿತ ತಯಾರಿಕಾ ಘಟಕಗಳಿಗೆ ಎಲ್ಪಿಜಿ ಮತ್ತು ನೈಸರ್ಗಿಕ ಅನಿಲವನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡುವಂತೆ ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟವು (ಎಫ್ಐಇಒ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಕ್ಕೆ ಈ ಕುರಿತು ಎಫ್ಐಇಒ ಅಧ್ಯಕ್ಷ ಎಸ್.ಸಿ. ರಲ್ಹಾನ್ ಪತ್ರ ಬರೆದಿದ್ದಾರೆ.

ಇಂಧನ ಪೂರೈಕೆಯಲ್ಲಿನ ಯಾವುದೇ ಅಡಚಣೆಯು ತಯಾರಿಕಾ ವಲಯಕ್ಕೆ ಸಮಸ್ಯೆ ಸೃಷ್ಟಿಸಲಿದೆ. ಇದರಿಂದ ಈ ವಲಯದ ರಫ್ತುದಾರರು ಸಮಸ್ಯೆ ಎದುರಿಸಲಿದ್ದಾರೆ. ಹೀಗಾಗಿ, ಆದ್ಯತೆಯ ಮೇರೆಗೆ ಎಲ್ಪಿಜಿ, ನೈಸರ್ಗಿಕ ಅನಿಲವನ್ನು ರಫ್ತು ಆಧಾರಿತ ಘಟಕಗಳಿಗೆ ತ್ವರಿತವಾಗಿ ಒದಗಿಸಬೇಕಿದೆ ಎಂದು ರಲ್ಹಾನ್ ಹೇಳಿದ್ದಾರೆ.

ಇಂಧನ ಲಭ್ಯತೆಯಲ್ಲಿ ಅಡಚಣೆ ಉಂಟಾದರೆ ದೇಶದ ರಫ್ತುದಾರರು ನಿಗದಿತ ಸಮಯಕ್ಕೆ ಉತ್ಪಾದನಾ ಗುರಿ ತಲುಪಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮವಾಗಿ, ಅಂತರರಾಷ್ಟ್ರೀಯ ಖರೀದಿದಾರರು ಬೇರೆ ರಾಷ್ಟ್ರಗಳ ಬಳಿ ಖರೀದಿಗೆ ಮುಂದಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.