ಸೋಮವಾರ, ಅಕ್ಟೋಬರ್ 21, 2019
24 °C

ದಾವಣಗೆರೆ ಜಿಲ್ಲೆಯಲ್ಲಿ ರಸಗೊಬ್ಬರ ಕಾರ್ಖಾನೆ: ಡಿವಿಎಸ್

Published:
Updated:
Prajavani

ರಾಯಚೂರು: ‘ರಸಗೊಬ್ಬರ ಕಾರ್ಖಾನೆ ಸ್ಥಾಪನೆಗೆ ದಾವಣಗೆರೆ ಜಿಲ್ಲೆ ಸೂಕ್ತ ಎಂದು ನಿರ್ಧರಿಸಲಾಗಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.

‘ರಸಗೊಬ್ಬರ ಕಾರ್ಖಾನೆಗೆ ಸ್ಥಾಪನೆ ಕೋರಿ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿದೆ. ವಿಜಯಪುರ ಮತ್ತು ರಾಯಚೂರಿಗೆ ಹೋಲಿಸಿದರೆ ದಾವಣಗೆರೆ ಜಿಲ್ಲೆ ಸೂಕ್ತ ಎಂದು ಕೊಚ್ಚಿಯ ತಜ್ಞರ ತಂಡ ತಿಳಿಸಿದೆ. ಕಾರ್ಖಾನೆಗೆ ನೀರು, ಪೆಟ್ರೋಲಿಯಂ ಗ್ಯಾಸ್‌ ಹಾಗೂ ರೈಲು ಸಂಪರ್ಕ ಮುಖ್ಯ’ ಎಂದು ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. 

‘ರಾಜ್ಯದಾದ್ಯಂತ ಈಚೆಗೆ ಉತ್ತಮ ಮಳೆ ಸುರಿದ ಕಾರಣ ಏಕಕಾಲಕ್ಕೆ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಬಂತು. ರೈತರಿಗೆ ತೊಂದರೆ ಆಗದಿರಲಿಯೆಂದು ರಸಗೊಬ್ಬರ ಆಮದು ಮಾಡಿಕೊಂಡು ಆಯಾ ಜಿಲ್ಲಾ ಕೇಂದ್ರಗಳಿಗೆ ನೇರವಾಗಿ ತಲುಪಿಸುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಿದೆ’ ಎಂದರು.

‘ನೀತಿ ಆಯೋಗವು ರಾಯಚೂರು ಮತ್ತು ಯಾದಗಿರಿ ಮಹತ್ವಾಕಾಂಕ್ಷಿ ಜಿಲ್ಲೆಗಳೆಂದು ಆಯ್ಕೆ ಮಾಡಿದ್ದು, ಎರಡೂ ಜಿಲ್ಲೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಅಗತ್ಯ ನೆರವು ನೀಡಲಿದೆ’ ಎಂದು ತಿಳಿಸಿದರು. 

Post Comments (+)