ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಹಬ್‌ಗೆ ವಿಪ್ರೊ ಪಾಲುದಾರ

Last Updated 15 ಜನವರಿ 2021, 16:15 IST
ಅಕ್ಷರ ಗಾತ್ರ

ಬೆಂಗಳೂರು: ಫಿಯಟ್ ಕ್ರಿಸ್ಲರ್ ಆಟೊಮೊಬೈಲ್ಸ್‌ (ಎಫ್‌ಸಿಎ) ಕಂಪನಿಯು ಹೈದರಾಬಾದ್‌ನಲ್ಲಿ ಆರಂಭಿಸಲಿರುವ ಡಿಜಿಟಲ್‌ ಹಬ್‌ನ ತಂತ್ರಜ್ಞಾನ ಸೇವಾ ಪಾಲುದಾರ ಆಗಿ ವಿಪ್ರೊ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಎಫ್‌ಸಿಎ ಕಂಪನಿಯ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲಸಗಳಿಗೆ ಈ ಹಬ್ ನೆರವಾಗಲಿದೆ. ವಿಪ್ರೊ ಕಂಪನಿಯು ಒಂದು ಸಾವಿರಕ್ಕಿಂತ ಹೆಚ್ಚಿನ ಜನರಿರುವ ಕುಶಲ ತಂತ್ರಜ್ಞರ ತಂಡವನ್ನು ಈ ಹಬ್‌ಗೆ ಸಿದ್ಧಪಡಿಸಿ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT