ನವದೆಹಲಿ: ಕೇಂದ್ರ ಸರ್ಕಾರ ಹಣಕಾಸು ಕಾಯ್ದೆ–2026ರ ಅಧಿಸೂಚನೆಯನ್ನು ಹೊರಡಿಸಿದೆ. ಈ ಕಾಯ್ದೆಯು ತೆರಿಗೆ ನಿಬಂಧನೆಗಳಲ್ಲಿ ಬದಲಾವಣೆಗಳನ್ನು ತರಲು ಅವಕಾಶ ಮಾಡಿಕೊಡುತ್ತದೆ.

ಈ ಕಾಯ್ದೆಯು ಮಾರ್ಚ್ 30ರಂದು ರಾಷ್ಟ್ರಪತಿ ಒಪ್ಪಿಗೆ ಪಡೆದುಕೊಂಡಿದ್ದು, 2026-27ನೇ ಸಾಲಿಗೆ ಕೇಂದ್ರ ಸರ್ಕಾರದ ಹಣಕಾಸು ಪ್ರಸ್ತಾವಗಳನ್ನು ಜಾರಿಗೆ ತರುತ್ತದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.

2026–27ರ ಆರ್ಥಿಕ ವರ್ಷದಲ್ಲಿ ಕೇಂದ್ರದ ಬಜೆಟ್ ಗಾತ್ರ ₹53.47 ಲಕ್ಷ ಕೋಟಿಯಾಗಿದೆ. ಇದು 2025–26ರ ಬಜೆಟ್ಗೆ ಹೋಲಿಸಿದರೆ ಶೇ 7.7ರಷ್ಟು ಅಧಿಕ. ಸರ್ಕಾರದ ಬಂಡವಾಳ ವೆಚ್ಚ ₹12.2 ಲಕ್ಷ ಕೋಟಿಯಾಗಿದೆ.

ತೆರಿಗೆ ಸಂಗ್ರಹದ ಮೂಲಕ ₹44.04 ಲಕ್ಷ ಕೋಟಿ ಮತ್ತು ಸಾಲದ ಮೂಲಕ ₹17.2 ಲಕ್ಷ ಕೋಟಿ ಪಡೆಯಲಿದೆ. ಶೇ 4.3ರ ವಿತ್ತೀಯ ಕೊರೆತೆಯ ಗುರಿ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.