ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಸೃಷ್ಟಿಯಾಗಿರುವ ಸವಾಲುಗಳನ್ನು ನಿಭಾಯಿಸಲು ಹಾಗೂ ಆರ್ಥಿಕ ನೀತಿ ರೂಪಿಸುವುದಕ್ಕೆ ನೆರವಾಗಲು ಕೇಂದ್ರ ಹಣಕಾಸು ಸಚಿವಾಲಯವು ಇದೇ ಮೊದಲ ಬಾರಿಗೆ ರಾಷ್ಟ್ರವ್ಯಾಪ್ತಿ ಕ್ಷೇತ್ರ ಭೇಟಿ ಕಾರ್ಯಕ್ಕೆ ಚಾಲನೆ ನೀಡಿದೆ.

ಇದರ ಭಾಗವಾಗಿ ಆರ್ಥಿಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳ ತಂಡವು ತಯಾರಿಕಾ ಘಟಕಗಳಿಗೆ ಹಾಗೂ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ, ತಳಮಟ್ಟದಿಂದ ಪ್ರತಿಕ್ರಿಯೆ ಪಡೆಯಲಿದೆ. ಅಧಿಕಾರಿಗಳ ತಂಡವು ಬೃಹತ್ ಕೈಗಾರಿಕೆಗಳು ಹಾಗೂ ಮಧ್ಯಮ ಮತ್ತು ಸಣ್ಣ ಗಾತ್ರದ ತಯಾರಿಕಾ ಘಟಕಗಳಿಗೆ ಭೇಟಿ ನೀಡಲಿದೆ.

ಮೂಲಸೌಕರ್ಯದಲ್ಲಿ ಇರುವ ಸಮಸ್ಯೆಗಳು, ನಿಯಮಗಳಲ್ಲಿನ ಅಡ್ಡಿಗಳು, ಪೂರೈಕೆ ವ್ಯವಸ್ಥೆಯಲ್ಲಿ ಆಗಿರುವ ಸಮಸ್ಯೆಗಳು, ಹಣಕಾಸಿನ ನೆರವು ಪಡೆಯುವುದರಲ್ಲಿನ ಸಮಸ್ಯೆ, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಇರುವ ಅಡ್ಡಿಗಳ ಬಗ್ಗೆ ನೇರವಾಗಿ ಮಾಹಿತಿ ಪಡೆಯಲು ತಂಡವು ಭೇಟಿ ನೀಡಲಿದೆ.

ಈ ಕುರಿತಾಗಿ ಹಣಕಾಸು ಸಚಿವಾಲಯದಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ದೇಶದಲ್ಲಿ ಸರ್ಕಾರದ ಕಡೆಯಿಂದ ಬಂಡವಾಳ ವೆಚ್ಚಗಳು ದೊಡ್ಡ ಮಟ್ಟದಲ್ಲಿ ಆಗುತ್ತಿದ್ದರೂ, ಖಾಸಗಿ ವಲಯದಿಂದ ಹೂಡಿಕೆ ಸಮಾನವಾಗಿ ಆಗಿಲ್ಲ. ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಕಚ್ಚಾ ತೈಲದ ಬೆಲೆಯನ್ನು ಹೆಚ್ಚಿಸಿದೆ, ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣವಾಗಿದೆ, ಚಾಲ್ತಿ ಖಾತೆ ಕೊರತೆಯನ್ನು ಹೆಚ್ಚಿಸಿದೆ. ಇದರಿಂದಾಗಿ ಉದ್ದಿಮೆಗಳ ಸಮಸ್ಯೆಗಳು ಹೆಚ್ಚಾಗಿವೆ.

ಸಮಸ್ಯೆಯ ತೀವ್ರತೆಯನ್ನು ಚೆನ್ನಾಗಿ ಅರಿತುಕೊಳ್ಳುವ ಉದ್ದೇಶದಿಂದ ಇಲಾಖೆಯು ತಳಮಟ್ಟದಲ್ಲಿ ಪ್ರತಿಕ್ರಿಯೆ ಪಡೆಯುವ ಬಯಕೆ ಹೊಂದಿದೆ. ಹೀಗಾಗಿ ಗರಿಷ್ಠ ಐದು ಮಂದಿ ಅಧಿಕಾರಿಗಳ ತಂಡವು ಬೇರೆ ಬೇರೆ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಲಿದೆ.

ಅಧಿಕಾರಿಗಳ ತಂಡಗಳು ತಯಾರಿಕೆ, ಮೂಲಸೌಕರ್ಯ ಸೇರಿದಂತೆ ವಿವಿಧ ವಲಯಗಳ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ಪ್ರತಿ ಭೇಟಿಯ ಸಂದರ್ಭದಲ್ಲಿ ತಂಡಗಳು ಕನಿಷ್ಠ ಎರಡು ನವೋದ್ಯಮಗಳ ಜೊತೆ ಸಮಾಲೋಚನೆ ನಡೆಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.