ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಹಿಂಜರಿತ; ಜನ ಏನಂತಾರೆ?

Last Updated 3 ಸೆಪ್ಟೆಂಬರ್ 2019, 18:37 IST
ಅಕ್ಷರ ಗಾತ್ರ

ಆರ್ಥಿಕ ಹಿಂಜರಿತ; ಜನ ಏನಂತಾರೆ?

ದೇಶಕ್ಕೆ ಹಿನ್ನಡೆ

ನೋಟು ರದ್ದತಿ ಹಾಗೂ ಜಿಎಸ್‌ಟಿಗಳಂತಹ ಆರ್ಥಿಕ ನೀತಿಗಳಿಂದ ದೇಶ ಕಳೆದ 20 ವರ್ಷಗಳಿಗಿಂತ ಹಿಂದಕ್ಕೆ ಸಾಗಿದಂತಾಗಿದೆ. ಮುಂದುವರಿಯಬೇಕಿದ್ದ ದೇಶಕ್ಕೆ ಹಿನ್ನಡೆಯಾಗಿದೆ ಎಂದರೆ ತಪ್ಪಾಗಲಾರದು.

ರಿಷಾದ್ , ಹುಣಸೂರು

–––––

ಆಡಳಿತಗಾರರಿಗೆ ತಿಳಿಯುತ್ತಿಲ್ಲವೇ?

ಆರ್ಥಿಕ ಹಿಂಜರಿತದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ. ಹಣ ಇಲ್ಲದಿದ್ದರೆ ದೇಶದ ಅಭಿವೃದ್ಧಿ ಹೇಗೆ ಸಾಧ್ಯ? ಅಭಿವೃದ್ಧಿಯಾಗದಿದ್ದಲ್ಲಿದೇಶ ಭವಿಷ್ಯವೇನು?. ಇಂತಹ ಸಾಮಾನ್ಯ‍ಪ್ರಶ್ನೆಗಳು ಕುರ್ಚಿ ಮೇಲೆ ಕುಳಿತವರಿಗೆ ಕಾಡುತ್ತಿಲ್ಲವೇ?

ಪ್ರಕಾಶ್‌, ಮೋರಿಗೆರೆ

––––

ದೇಶ ಕೆಡವಿದ ಆರ್ಥಿಕ ನೀತಿ

ವ್ಯಾಪಾರದಲ್ಲಿ ನಷ್ಟವಾಯಿತು ಎಂದು ಹೇಳಿಕೊಳ್ಳುತ್ತಿದ್ದ ನಮಗೆ ನಮ್ಮ ದೇಶವೇ ನಷ್ಟದಲ್ಲಿದೆ ಎಂದು ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶ ಕಟ್ಟುವುದು ಸುಲಭ. ಆದರೆ, ದೇಶ ಕೆಡವಲು ಕೆಲವೇ ಸಮಯ ಸಾಕು ಎನ್ನುವುದು ಆರ್ಥಿಕ ನೀತಿಗಳಿಂದ ಸಾಬೀತು.

ಶ್ರೀನಿವಾಸ್, ಬೆಂಗಳೂರು

––

ಕೈಗಾರಿಕೆಗಳಿಂದ ಉದ್ಯೋಗ ಸೃಷ್ಟಿ

ಹೆಚ್ಚು ಕೈಗಾರಿಕೆಗಳ ನಿರ್ಮಾಣದಿಂದ ದೇಶದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಾಗುತ್ತದೆ. ಆದರೆ, ಇರುವ ಕೈಗಾರಿಕೆಗಳನ್ನು ಮುಚ್ಚುವುದರಿಂದ ನಿರುದ್ಯೋಗ ಹೆಚ್ಚಾಗುತ್ತದೆ. ಈ ಎರಡರ ನಡುವೆ ಅತಂತ್ರವಾಗಿ ಸಿಲುಕಿದೆ ದೇಶದ ಭವಿಷ್ಯ.

ಲೋಕೇಶ್‌, ಬೆಳಗಾವಿ

–––

ಕೃಷಿಗೆ ನೀಡಿ ಹೆಚ್ಚು ಬೆಂಬಲ

ಕೃಷಿಗೆ ಹೆಚ್ಚಿನ ಆದ್ಯತೆ ನೀಡದ ಕಾರಣ ದೇಶ ಈ ಸ್ಥಿತಿಗೆ ತಲುಪಿದೆ. ಕೈಗಾರಿಕೆಗಳ ಹೆಸರಲ್ಲಿ ಉದ್ಯಮಿಗಳು ಲಾಭ ಪಡೆದು ಜೇಬು ತುಂಬಿಸಿಕೊಳ್ಳುತ್ತಾರೆ. ಅದೇ‍ಪ್ರೋತ್ಸಾಹ ಕೃಷಿಕರಿಗೆ ನೀಡಿದ್ದರೆ ಅವರ ಶ್ರಮದಿಂದ ಹಲವು ಕುಟುಂಬಗಳ ಹೊಟ್ಟೆ ತುಂಬುತ್ತಿತ್ತು.

ಓಂಕಾರ ಮೂತಿ೯, ಶಿರಾ

–––

ಇದೇನಾ ಕೈಗಾರಿಕಾ ಕ್ರಾಂತಿ?

ದುಡಿಯುವ ಕೈಗಳನ್ನು ಕಟ್ಟಿಹಾಕಿದ್ದು ದೇಶದ ಅಭಿವೃದ್ಧಿಯೇ?. ದುಡಿಮೆ ನಂಬಿ‌ದ್ದವರನ್ನು ಬೀದಿಗೆ ತಳ್ಳಿದ್ದು ದೇಶದ ಹಿತವೇ? ಕೈಗಾರಿಕೆಗಳನ್ನು ಮುಚ್ಚಿಸಿ ದೇಶಕ್ಕೇ ಬೀಗ ಹಾಕುತ್ತಿರುವುದು ನಿಜವಾದ ಕೈಗಾರಿಕಾ ಕ್ರಾಂತಿಯೇ?

ಮುರುಳಿ, ದೊಡ್ಡಬಳ್ಳಾಪುರ

–––

ಮಾನವ ಸಂಪನ್ಮೂಲದ ಹರಣ

ತಂತ್ರಜ್ಞಾನ ಎಷ್ಟೇ ಅಭಿವೃದ್ಧಿಯಾದರೂ ಒಂದು ದೇಶದ ಮಾನವ ಸಂಪನ್ಮೂಲ ಸಮರ್ಪಕವಾಗಿ ಬಳಕೆಯಾಗಬೇಕು. ಇದನ್ನು ಕಡೆಗಣಿಸಿದ ಸರ್ಕಾರಗಳು ಮಾನವ ಸಂಪನ್ಮೂಲಕ್ಕಿಂತ ಯಂತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿವೆ. ಇದರ ಪರಿಣಾಮ ಜನರಿಗೆ ನಿರುದ್ಯೋಗ, ದೇಶಕ್ಕೆ ಆರ್ಥಿಕ ಹೊಡೆತ ಬಡಿ‌ದಿದೆ.

ಎಚ್ಚರಪ್ಪ, ನಾಗೇಂದ್ರಗಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT