ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿಆರ್‌–3ಬಿ: ಮೂರು ಗಡುವು

ಜಿಎಸ್‌ಟಿ ಮಾಹಿತಿ
Last Updated 22 ಜನವರಿ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದಂತೆ ವಾರ್ಷಿಕ ವಹಿವಾಟಿನ ಆಧಾರದಲ್ಲಿ ತೆರಿಗೆದಾರರನ್ನು 3 ರೀತಿಯಲ್ಲಿ ವರ್ಗೀಕರಿಸಲಾಗಿದ್ದು, ಅದರಂತೆ ಜಿಎಸ್‌ಟಿಆರ್‌–3ಬಿ ಸಲ್ಲಿಕೆಯಗಡುವು ನೀಡಲಾಗಿದೆ.

ಸದ್ಯಕ್ಕೆ, ರಿಟರ್ನ್ಸ್‌ ಸಲ್ಲಿಕೆಗೆ ಪ್ರತಿ ತಿಂಗಳ 20 ಅಂತಿಮ ದಿನವಾಗಿದೆ. ಆದರೆ, ಇನ್ನು ಮುಂದೆ ವರ್ಗೀಕರಣದ ಆಧಾರದ ಮೇಲೆ ಪ್ರತಿ ತಿಂಗಳ 20, 22 ಮತ್ತು 24ರ ಗಡುವು ಇರಲಿದೆ.

ವರ್ಗೀಕರಣ ಹೇಗೆ: ₹ 5 ಕೋಟಿ ವಾರ್ಷಿಕ ವಹಿವಾಟು ಹೊಂದಿರುವವರಿಗೆ ಪ್ರತಿ ತಿಂಗಳ 20 ಕೊನೆಯ ದಿನವಾಗಿದೆ.₹ 5ಕೋಟಿಗಿಂತ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವರಲ್ಲಿ ಎರಡು ವರ್ಗೀಕರಣ ಮಾಡಿದ್ದು ರಿಟರ್ನ್ಸ್‌ ಸಲ್ಲಿಕೆಗೆ 22 ಮತ್ತು 24 ಕಡೆಯ ದಿನವಾಗಿರುತ್ತದೆ.

ಅಂತಿಮದಿನ ಏಕಕಾಲಕ್ಕೆ ರಿಟರ್ನ್ಸ್‌ ಸಲ್ಲಿಸಲು ತೆರಿಗೆದಾರರು ಮುಗಿ ಬೀಳುವುದರಿಂದ ಜಾತಲಾಣದ ಮೇಲೆ ಒತ್ತಡ ಉಂಟಾಗಿ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದೆ. ಇದನ್ನು ತಪ್ಪಿಸಲು ಹಣಕಾಸು ಸಚಿವಾಲಯ ಈ ನಿರ್ಧಾರಕ್ಕೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT