ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ವಾಣಿಜ್ಯೋದ್ಯಮ ಸಂಘಗಳಬಲವರ್ಧನೆಗೆ ಕ್ರಿಯಾ ಯೋಜನೆ

‘ಎಫ್‌ಕೆಸಿಸಿಐ‘ ಅಧ್ಯಕ್ಷ ಜನಾರ್ದನ ಆದ್ಯತೆ
Last Updated 3 ಅಕ್ಟೋಬರ್ 2019, 12:03 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಅಧ್ಯಕ್ಷ ಸಿ. ಆರ್. ಜನಾರ್ದನ ಅವರು ತಮ್ಮ ಅಧಿಕಾರಾವಧಿಯಲ್ಲಿ ಕಾರ್ಯಗತಗೊಳಿಸಬೇಕಾದ ಕಾರ್ಯಕ್ರಮಗಳ ಕ್ರಿಯಾಯೋಜನೆ ರೂಪಿಸಿದ್ದು, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗಳನ್ನು ಬಲಪಡಿಸುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ್ದಾರೆ.

‘ದಾಬಸ್‍ಪೇಟೆಯಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ, ಕೌಶಲ್ಯಾಭಿವೃದ್ಧಿ ಕುರಿತು ಕಾರ್ಯಕ್ರಮಗಳನ್ನು ಏರ್ಪಡಿಸುವುದು, ಕೈಗಾರಿಕಾ ಟೌನ್‍ಷಿಪ್‍ ನಿರ್ಮಾಣ, ಮಹಿಳಾ ಉದ್ದಿಮೆದಾರರ ಕಾರ್ಯಕ್ರಮ ಹಾಗೂ ವಸ್ತು ಪ್ರದರ್ಶನಗಳನ್ನು ಏರ್ಪಡಿಸುವುದು, ಕೃಷಿ ಹಾಗೂ ಆಹಾರ ಸಂಸ್ಕರಣಾ ಮೇಳ ಏರ್ಪಡಿಸುವುದು 2019-20ರ ಕ್ರಿಯಾ ಯೋಜನೆಗಳ ಮುಖ್ಯಾಂಶಗಳಾಗಿವೆ’ ಎಂದು ಅವರು ಹೇಳಿದ್ದಾರೆ. ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.

‘ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್‍ ಅವರನ್ನು ‘ಎಫ್‌ಕೆಸಿಸಿಐ’ ನಿಯೋಗವು ಈಗಾಗಲೇ ಭೇಟಿ ಮಾಡಿ ರಾಜ್ಯವು ರೂಪಿಸುತ್ತಿರುವ ನೂತನ ಕೈಗಾರಿಕಾ ನೀತಿ 2019-24ಕ್ಕೆ ಅನೇಕ ಸಲಹೆಗಳನ್ನು ನೀಡಿದೆ. ಆರ್ಥಿಕ ಹಿಂಜರಿತದಿಂದ ಹೊರಬರಲು ರಾಜ್ಯವು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಅವರ ಗಮನಕ್ಕೆ ತರಲಾಗಿದೆ.

‘ಸದ್ಯಕ್ಕೆ ದೇಶದಲ್ಲಿ ಕಂಡು ಬಂದಿರುವ ಆರ್ಥಿಕ ಹಿಂಜರಿತವು ಆರ್ಥಿಕ ಚಟುವಟಿಕೆಗಳ ಏರಿಳಿತಗಿಂತ ಅರ್ಥ ವ್ಯವಸ್ಥೆಯ ವಿವಿಧ ವಲಯಗಳಲ್ಲಿನ ಮಂದಗತಿಯ ಫಲಶ್ರುತಿಯಾಗಿದೆ. ದೇಶಿ ಕೈಗಾರಿಕಾ ರಂಗವು ಈ ಪರಿಸ್ಥಿತಿಗೆ ಕೇವಲ ಸರ್ಕಾರವನ್ನಷ್ಟೇ ದೂಷಿಸದೆ, ಈ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿದರೆ ಅಲ್ಪಾವಧಿಯಲ್ಲಿ ಚೇತರಿಕೆ ಸಾಧ್ಯವಾಗಲಿದೆ.

ಕೃಷಿ ತಂತ್ರಜ್ಞಾನ ಪ್ರದರ್ಶನ: ‘2020ರ ಏಪ್ರಿಲ್‌ 8ರಿಂದ 12ರವರೆಗೆ ನಗರದ ಅರಮನೆ ಮೈದಾನದಲ್ಲಿ ಕೃಷಿ ಆಹಾರ ಸಂಸ್ಕರಣಾ ಪ್ರದರ್ಶನ ಏರ್ಪಡಿಸಲಾಗುವುದು’ ಎಂದೂ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT