ಫ್ಲಿಪ್‌ಕಾರ್ಟ್‌ನ ‘ಬಿಗ್‌ ಬಿಲಿಯನ್ ಡೇ: ಮೊಬೈಲ್‌ಗೆ ಭಾರಿ ರಿಯಾಯ್ತಿ

7

ಫ್ಲಿಪ್‌ಕಾರ್ಟ್‌ನ ‘ಬಿಗ್‌ ಬಿಲಿಯನ್ ಡೇ: ಮೊಬೈಲ್‌ಗೆ ಭಾರಿ ರಿಯಾಯ್ತಿ

Published:
Updated:
Deccan Herald

ನವದೆಹಲಿ: ಫ್ಲಿಪ್‌ಕಾರ್ಟ್‌ ಕಂಪನಿಯ ‘ಬಿಗ್‌ ಬಿಲಿಯನ್ ಡೇ’ನಲ್ಲಿ ಖರೀದಿಸುವವರಿಗೆ ಭಾರಿ ರಿಯಾಯ್ತಿಗಳು ಸಿಗಲಿವೆ. ಅದರಲ್ಲಿಯೂ ಮೊಬೈಲ್‌ಫೋನ್‌ ಕೊಳ್ಳುವವರಿಗೆ ಬಂಪರ್ ಕೊಡುಗೆಗಳನ್ನು ಕಂಪನಿಗಳು ಘೋಷಿಸಿವೆ.

ಸ್ಯಾಮ್ಸಂಗ್‌, ಪ್ಯಾನಸೋನಿಕ್‌, ಹುವಾವೆ, ಆಸಸ್‌ ಕಂಪನಿಗಳು ಮೊಬೈಲ್‌ಗಳ ಮೇಲಿನ ಬೆಲೆಯನ್ನು ಶೇ 62ರವರೆಗೂ ಇಳಿಕೆ ಮಾಡಿವೆ. ಅಕ್ಟೋಬರ್‌ 10ರ ಮಧ್ಯರಾತ್ರಿಯಿಂದ ಅ.14ರವರೆಗೆ ಬಿಗ್‌ ಬಿಲಿಯನ್ ಡೇ ಮಾರಾಟ ನಡೆಯಲಿದೆ. ಅ.11ರಂದು ಮೊಬೈಲ್‌ ಫೋನ್‌ಗಳ ಮಾರಾಟ ಆರಂಭವಾಗಲಿವೆ.  

ಸ್ಯಾಮ್ಸಂಗ್‌ ಗೆಲಕ್ಸಿ ಜಿ8 ಬೆಲೆ ₹45,990 ಇದೆ. ₹20,000 ವಿನಾಯ್ತಿ ಘೋಷಿಸಿರುವುದರಿಂದ ₹29,990ಕ್ಕೆ ಸಿಗಲಿದೆ.

ಆಸಸ್‌ ಕಂಪನಿ ಫೋನ್‌ಗಳಿಗೆ ಕನಿಷ್ಠ ₹ 1,000 ರಿಂದ ಗರಿಷ್ಠ ₹ 2,000ದವರೆಗೆ ವಿನಾಯ್ತಿ ನೀಡಲಿದೆ. ಪ್ಯಾನಸೋನಿಕ್‌ ಕಂಪನಿಯು ಪಿ91 4ಜಿ ಸ್ಮಾರ್ಟ್‌ಫೋನ್‌ ಬೆಲೆ ₹ 7,999 ಇದ್ದು, ಕೇವಲ  ₹ 2,990ಕ್ಕೆ ಸಿಗಲಿದೆ. ಸದ್ಯ, ಅಮೆಜಾನ್‌ನಲ್ಲಿ ಇದರ ಬೆಲೆ  ₹ 3,999 ಇದೆ.

ಹುವಾವೆ ಕಂಪನಿಯು ಹಾನರ್‌ ಬ್ರ್ಯಾಂಡ್‌ನ ಫೋನ್‌ಗಳ ಬೆಲೆಯನ್ನು ಕನಿಷ್ಠ ₹ 500ರಿಂದ ಗರಿಷ್ಠ ₹ 8 ಸಾವಿರದವರೆಗೂ ಕಡಿಮೆ ಮಾಡಿದೆ.

₹ 10 ಸಾವಿರದೊಳಗಿನ ಸ್ಮಾರ್ಟ್‌ಫೋನ್‌ಗಳಲ್ಲಿ ರೆಲ್ಮಿ, ಇನ್‌ಫಿನಿಕ್ಸ್‌, ಒಪ್ಪೊ ಎ71 ಗಳಿಗೆ ₹ 2 ಸಾವಿರದಿಂದ ₹4 ಸಾವಿರದವರೆಗೆ ವಿನಾಯ್ತಿ ಸಿಗಲಿದೆ.

ಅಮೆಜಾನ್‌ ಕಂಪನಿಯೂ ಇದೇ 10ರಿಂದ 15ರವರೆಗೆ ‘ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌’ ಹೆಸರಿನಲ್ಲಿ ಭಾರಿ ರಿಯಾಯ್ತಿ ಮಾರಾಟ ಆರಂಭಿಸಲಿದ್ದು, ವಿವಿಧ ಉತ್ಪನ್ನಗಳ ಮೇಲೆ ವಿನಾಯ್ತಿ ಕೊಡುಗೆಗಳನ್ನು ಘೋಷಿಸಿದೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !