ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ. 26ರಂದು ‘ಕ್ರಾಫ್ಟೆಡ್‌ ಬೈ ಭಾರತ್‌’ ಮಾರಾಟ ಮೇಳ: ಫ್ಲಿಪ್‌ಕಾರ್ಟ್‌

Last Updated 22 ಜನವರಿ 2022, 17:02 IST
ಅಕ್ಷರ ಗಾತ್ರ

ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ‘ಫ್ಲಿಪ್‌ಕಾರ್ಟ್‌ ಸಮರ್ಥ್‌’ನಲ್ಲಿ ಜನವರಿ 26ರಂದು ‘ಕ್ರಾಫ್ಟೆಡ್ ಬೈ ಭಾರತ್’ ಎಂಬ ಹೆಸರಿನ ಮಾರಾಟ ಮೇಳವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ, ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವಂತಹ ಕರಕುಶಲ ಮತ್ತು ಕೈಮಗ್ಗದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಫ್ಲಿಪ್‌ಕಾರ್ಟ್‌ ಶನಿವಾರ ತಿಳಿಸಿದೆ.

ಇ-ಕಾಮರ್ಸ್ ಅನ್ನು ಅತ್ಯಧಿಕ ಮಟ್ಟದಲ್ಲಿ ಅಳವಡಿಸಿಕೊಂಡಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಇಲ್ಲಿನ ಸಣ್ಣ ವ್ಯವಹಾರಗಳು ಇ-ಕಾಮರ್ಸ್ ಅನ್ನು ಉತ್ತಮ ರೀತಿಯಲ್ಲಿ ಅಳವಡಿಸಿಕೊಂಡಿವೆ. ಇದರಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ‘ಫ್ಲಿಪ್‍ಕಾರ್ಟ್ ಸಮರ್ಥ್’ ಪ್ಲಾಟ್‌ಫಾರಂ ಬಳಕೆಯು ರಾಜ್ಯದಲ್ಲಿ 1.7 ಪಟ್ಟು ಹೆಚ್ಚಳವಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಕುಶಲಕರ್ಮಿಗಳು, ನೇಕಾರರು ಮತ್ತು ಕರಕುಶಲ ಉತ್ಪನ್ನಗಳ ತಯಾರಕರು ಇ-ಕಾಮರ್ಸ್ ಕ್ಷೇತ್ರ ಪ್ರವೇಶಿಸಲು‘ಫ್ಲಿಪ್‍ಕಾರ್ಟ್ ಸಮರ್ಥ್’ ಅನುಕೂಲ ‌ಮಾಡಿಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT