ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌ಗೆ ಅಂತಿಮ ಸಿದ್ಧತೆ : 'ಹಲ್ವಾ' ಸಮಾರಂಭದಲ್ಲಿ ವಿತ್ತ ಸಚಿವಾಲಯ ಭಾಗಿ

Last Updated 26 ಜನವರಿ 2023, 11:27 IST
ಅಕ್ಷರ ಗಾತ್ರ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯ ಖಾತೆ ಸಚಿವರಾದ ಭಾಗವತ್ ಕರದ್ ಮತ್ತು ಪಂಕಜ್ ಚೌಧರಿ ಸೇರಿದಂತೆ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಗುರುವಾರ ಬಜೆಟ್‌ ಪೂರ್ವ ವಾಡಿಕೆಯಾದ ‘ಹಲ್ವಾ’ ಸಮಾರಂಭದಲ್ಲಿ ಭಾಗಿಯಾದರು.

ಸಮಾರಂಭವು ನವದೆಹಲಿಯಲ್ಲಿನ ಹಣಕಾಸು ಸಚಿವಾಲಯದ ಉತ್ತರ ಬ್ಲಾಕ್ ಆವರಣದಲ್ಲಿ ನಡೆಯಿತು. ಪ್ರತಿ ವರ್ಷ ಬಜೆಟ್ ಪ್ರಕ್ರಿಯೆ ಅಂತಿಮಗೊಳಿಸುವಿಕೆ ಪ್ರಾರಂಭವಾಗುವ ಮೊದಲು ಸಾಂಪ್ರದಾಯಿಕ ಈ ಹಲ್ವಾ ಸಮಾರಂಭವನ್ನು ನಡೆಸಲಾಗುತ್ತದೆ.

ಹಿಂದಿನ ಎರಡು ಬಜೆಟ್‌ಗಳಂತೆ, 2023-24 ರ ಕೇಂದ್ರ ಮುಂಗಡ ಪತ್ರ ಕೂಡ ಕಾಗದರಹಿತ ರೂಪದಲ್ಲಿರಲಿದೆ. ವಿತ್ತ ಸಚಿವರು ಫೆಬ್ರವರಿ 1, 2023 ರಂದು ಕೇಂದ್ರ ಬಜೆಟ್ 2023-24 ಅನ್ನು ಮಂಡಿಸಲಿದ್ದಾರೆ.

ವಾರ್ಷಿಕ ಆಯ–ವ್ಯಯ ಸೇರಿದಂತೆ ಎಲ್ಲಾ 14 ಬಜೆಟ್ ಸಂಬಂಧಿ ದಾಖಲೆಗಳು 'ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್' ನಲ್ಲಿ ಲಭ್ಯವಾಗಲಿದೆ. ಸಂಸದರು ಮತ್ತು ಸಾರ್ವಜನಿಕರು ಡಿಜಿಟಲ್‌ ರೂಪದಲ್ಲಿಯೇ ಮುಂಗಡ ಪತ್ರದ ಪ್ರತಿ ಪಡೆಯಬಹುದು ಎಂದು ವಿತ್ತ ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT