ನವದೆಹಲಿ: ಜಾಗತಿಕ ಮಟ್ಟದಲ್ಲಿನ ಸಂಘರ್ಷಗಳ ಪರಿಣಾಮವಾಗಿ ಎಫ್ಎಂಸಿಜಿ ಕಂಪನಿಗಳ ಲಾಭದ ಪ್ರಮಾಣ ಕಡಿಮೆ ಆಗುತ್ತಿದ್ದು, ಕಂಪನಿಗಳು ಉತ್ಪನ್ನಗಳ ಬೆಲೆಯನ್ನು ಅಳೆದು–ತೂಗಿ ಹೆಚ್ಚು ಮಾಡಲು ಸಿದ್ಧತೆ ನಡೆಸಿವೆ.

ಹೀಗಾಗಿ ನಿತ್ಯದ ಬಳಕೆಯ ಸೋಪು, ಡಿಟರ್ಜೆಂಟ್, ಬಿಸ್ಕತ್ತು, ಪ್ಯಾಕ್ ಮಾಡಲಾದ ಆಹಾರ ಪದಾರ್ಥ, ಪಾನೀಯಗಳು ದುಬಾರಿ ಆಗುವ ಸಾಧ್ಯತೆ ಇದೆ.

ಕಚ್ಚಾ ತೈಲದ ಬೆಲೆಯಲ್ಲಿನ ಅಸ್ಥಿರತೆ, ಸರಕು ಸಾಗಣೆ ವೆಚ್ಚ ಹೆಚ್ಚಳ, ರೂಪಾಯಿ ಮೌಲ್ಯದಲ್ಲಿನ ಕುಸಿತ, ಜಾಗತಿಕ ಪೂರೈಕೆ ವ್ಯವಸ್ಥೆಗೆ ಆಗಿರುವ ಧಕ್ಕೆಯ ಕಾರಣದಿಂದಾಗಿ ವಿವಿಧ ಉತ್ಪನ್ನಗಳ ಬೆಲೆ ಹೆಚ್ಚಳಕ್ಕೆ ಸಿದ್ಧತೆ ನಡೆದಿದೆ ಎಂಬುದನ್ನು ಪ್ರಮುಖ ಎಫ್ಎಂಸಿಜಿ ಕಂಪನಿಗಳು ತಮ್ಮ ಈಚಿನ ಹಣಕಾಸಿನ ಫಲಿತಾಂಶವನ್ನು ಪ್ರಕಟಿಸುವ ಸಂದರ್ಭದಲ್ಲಿ ಹೇಳಿವೆ.

ಬೆಲೆ ಹೆಚ್ಚಳ ಮಾಡಬೇಕಾದ ಒತ್ತಡವು ಎಲ್ಲ ಬಗೆಯ ಉತ್ಪನ್ನಗಳ ಮೇಲೆಯೂ ಇದೆ. ಎಫ್ಎಂಸಿಜಿ ಕಂಪನಿಗಳು ತಮ್ಮ ಲಾಭ ಗಳಿಕೆ ಪ್ರಮಾಣವನ್ನು ಉಳಿಸಿಕೊಳ್ಳಲು ಬೆಲೆ ಹೆಚ್ಚಿಸುವ ಅಥವಾ ಪೊಟ್ಟಣದಲ್ಲಿನ ಉತ್ಪನ್ನದ ತೂಕವನ್ನು ಕಡಿಮೆ ಮಾಡುವ ಮಾರ್ಗ ಅನುಸರಿಸುತ್ತಿವೆ.

ರಿಯಾಯಿತಿ ಪ್ರಮಾಣ ಕಡಿಮೆ ಮಾಡಿ, ಪೂರೈಕೆ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಿ ವೆಚ್ಚ ಹೆಚ್ಚಳವನ್ನು ನಿಭಾಯಿಸಲು ಕಂಪನಿಗಳು ಯತ್ನಿಸುತ್ತಿವೆಯಾದರೂ, ಬೆಲೆ ಹೆಚ್ಚಳದ ಹೊರೆ ಗ್ರಾಹಕರಿಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ.

ವೆಚ್ಚ ಹೆಚ್ಚಳದ ಪರಿಣಾಮವನ್ನು ಎದುರಿಸಲು ಉತ್ಪನ್ನಗಳ ಬೆಲೆಯನ್ನು ಜಾಸ್ತಿ ಮಾಡುವ ಕೆಲಸ ಆರಂಭವಾಗಿದೆ ಎಂದು ಡಾಬರ್ ಇಂಡಿಯಾ ಕಂಪನಿಯ ಜಾಗತಿಕ ವಹಿವಾಟುಗಳ ಸಿಇಒ ಮೋಹಿತ್ ಮಲ್ಹೋತ್ರಾ ಹೇಳಿದ್ದಾರೆ.

‘ನಾವು ವಿವಿಧ ಉತ್ಪನ್ನಗಳ ಬೆಲೆಯಲ್ಲಿ ಶೇ 4ರಷ್ಟು ಹೆಚ್ಚಳ ಮಾಡಿದ್ದೇವೆ... ಆದರೆ ಬೆಲೆ ಏರಿಕೆ ಹಾಗೂ ಮಾರಾಟ ಹೆಚ್ಚಳದಿಂದಾಗಿ ದೇಶದ ಮಾರುಕಟ್ಟೆಯಲ್ಲಿ ನಮ್ಮ ವಹಿವಾಟು ಮೊತ್ತ ಈ ವರ್ಷ ಎರಡಂಕಿಯ ಪ್ರಮಾಣದಲ್ಲಿ ಬೆಳೆಯುವ ನಿರೀಕ್ಷೆ ಇದೆ’ ಎಂದು ಮಲ್ಹೋತ್ರಾ ತಿಳಿಸಿದ್ದಾರೆ.

ಇಂಧನ ಮತ್ತು ಪೊಟ್ಟಣದ ವೆಚ್ಚಗಳಲ್ಲಿನ ಸರಿಸುಮಾರು ಶೇ 20ರಷ್ಟು ಏರಿಕೆ ನಿಭಾಯಿಸಲು ಉತ್ಪನ್ನಗಳ ಬೆಲೆಯನ್ನು ಶೀಘ್ರವೇ ಹೆಚ್ಚು ಮಾಡಲಾಗುತ್ತದೆ ಎಂಬ ಸೂಚನೆಯನ್ನು ಬಿಸ್ಕತ್ತು, ಬೇಕರಿ ಉತ್ಪನ್ನಗಳನ್ನು ಸಿದ್ಧಪಡಿಸುವ ಬ್ರಿಟಾನಿಯಾ ನೀಡಿದೆ.

ಪೊಟ್ಟಣದಲ್ಲಿ ಇರುವ ಉತ್ಪನ್ನದ ತೂಕವನ್ನು ಕಡಿಮೆ ಮಾಡುವ ಹಾಗೂ ಬೆಲೆಯನ್ನು ಹೆಚ್ಚಿಸುವ ಆಯ್ಕೆಗಳನ್ನು ಬ್ರಿಟಾನಿಯಾ ಪರಿಶೀಲಿಸುತ್ತಿದೆ. ‘ನಾವು ಕೆಲವು ಉತ್ಪನ್ನಗಳ ಬೆಲೆ ಹೆಚ್ಚಿಸಬೇಕಾಗುತ್ತದೆ...’ ಎಂದು ಕಂಪನಿಯ ಎಂ.ಡಿ ಹಾಗೂ ಸಿಇಒ ರಕ್ಷಿತ್ ಹರ್ಗವೆ ತಿಳಿಸಿದ್ದಾರೆ. ಎಲ್ಪಿಜಿ ಮತ್ತು ಪಿಎನ್ಜಿ ಬೆಲೆ ಏರಿಕೆಯು ಕೂಡ ಉತ್ಪನ್ನಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ.

ಎಫ್ಎಂಸಿಜಿ ಕ್ಷೇತ್ರ ದೈತ್ಯ ಹಿಂದುಸ್ತಾನ್ ಯೂನಿಲಿವರ್ (ಎಚ್ಯುಎಲ್) ತನ್ನ ವಿವಿಧ ಉತ್ಪನ್ನಗಳ ಬೆಲೆಯನ್ನು ಈಗಾಗಲೇ ಶೇ 5ರವರೆಗೆ ಹೆಚ್ಚು ಮಾಡಿದೆ. ‘ವೆಚ್ಚಗಳನ್ನು ಗಮನಿಸಿ ಅಗತ್ಯ ಎದುರಾದಾಗ ನಾವು ಇನ್ನಷ್ಟು ಪ್ರಮಾಣದಲ್ಲಿ ಬೆಲೆ ಹೆಚ್ಚಳದ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಕಂಪನಿಯ ಸಿಎಫ್ಒ ನಿರಂಜನ್ ಗುಪ್ತಾ ಹೇಳಿದ್ದಾರೆ.

ಪಿಡಿಲೈಟ್ ಕಂಪನಿಯು ತನ್ನ ಉತ್ಪನ್ನಗಳ ಬೆಲೆಯನ್ನು ಈ ವರ್ಷ ಎರಡು ಬಾರಿ ಹೆಚ್ಚಿಸಿದೆ. ಇನ್ನೊಂದು ಬಾರಿ ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಬಾಟಲಿ ನೀರು ಹಾಗೂ ವಿವಿಧ ಪಾನೀಯಗಳನ್ನು ಮಾರಾಟ ಮಾಡುವ ಕಂಪನಿಗಳು ರಿಯಾಯಿತಿ ಪ್ರಮಾಣ ಕಡಿಮೆ ಮಾಡಲು ಆರಂಭಿಸಿವೆ. ಇಂಧನ ಬೆಲೆ ಜಾಸ್ತಿ ಆದರೆ ರಿಯಾಯಿತಿ ಇನ್ನಷ್ಟು ಕಡಿಮೆ ಆಗಬಹುದು ಎಂದು ವರುಣ್ ಬೆವರೇಜಸ್ ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.