ಗುರುವಾರ , ಅಕ್ಟೋಬರ್ 17, 2019
21 °C

ವಿದೇಶಿ ವಿನಿಮಯ ಸಂಗ್ರಹ ದಾಖಲೆ

Published:
Updated:
Prajavani

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಅಕ್ಟೋಬರ್ 4ಕ್ಕೆ ಕೊನೆಗೊಂಡ ವಾರದಲ್ಲಿ ₹ 29,280 ಕೋಟಿ ಹೆಚ್ಚಾಗಿ ಸಾರ್ವಕಾಲಿಕ ದಾಖಲೆ ಮಟ್ಟವಾದ ₹31.09 ಲಕ್ಷ ಕೋಟಿಗೆ ತಲುಪಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಇದಕ್ಕೂ ಹಿಂದಿನ ವಾರ ಮೀಸಲು ಸಂಗ್ರಹ ₹ 30.81 ಲಕ್ಷ ಕೋಟಿಗಳಷ್ಟಿತ್ತು. ಮೀಸಲು ಸಂಗ್ರಹದ ಅತಿ ಹೆಚ್ಚಿನ ಪಾಲು ಹೊಂದಿರುವ ವಿದೇಶಿ ಕರೆನ್ಸಿಗಳ ಸಂಗ್ರಹವು ₹ 28,400 ಕೋಟಿಗಳಷ್ಟು ಹೆಚ್ಚಾಗಿ ₹ 28.82 ಲಕ್ಷ ಕೋಟಿಗೆ ತಲುಪಿದೆ. ಹೀಗಾಗಿ ಒಟ್ಟಾರೆ ಸಂಗ್ರಹದಲ್ಲಿಯೂ ಏರಿಕೆಯಾಗಿದೆ.

ಚಿನ್ನದ ಮೀಸಲು ಸಂಗ್ರಹ ₹1,647 ಕೋಟಿಗಳಷ್ಟು ಹೆಚ್ಚಾಗಿ ₹ 1.92 ಲಕ್ಷ ಕೋಟಿಗೆ ತಲುಪಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್‌) ಭಾರತದ ಕರೆನ್ಸಿ ಸಂಗ್ರಹ ₹64 ಕೋಟಿ ಹೆಚ್ಚಾಗಿ ₹ 28,400 ಕೋಟಿಗಳಿಗೆ ಏರಿಕೆ ಕಂಡಿದೆ.

Post Comments (+)