ಸೋಮವಾರ, ಜನವರಿ 27, 2020
26 °C

ವಿದೇಶಿ ಬಂಡವಾಳ ಹೊರಹರಿವು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ಅಮೆರಿಕ–ಇರಾನ್‌ ಸೇನಾ ಸಂಘರ್ಷದಿಂದಾಗಿ ವಿದೇಶಿ ಹೂಡಿಕೆದಾರರು (ಎಫ್‌ಪಿಐ) ಹಿಂದಿನ ವಾರ ಷೇರುಗಳ ಮಾರಾಟಕ್ಕೆ ಹೆಚ್ಚು ಗಮನ ನೀಡಿದ್ದರು.

ಜನವರಿ 1 ರಿಂದ 10ರವರೆಗೆ ನಡೆದಿರುವ ವಹಿವಾಟಿನಲ್ಲಿ ದೇಶದ ಬಂಡವಾಳ ಮಾರುಕಟ್ಟೆಯಿಂದ ₹ 2,415 ಕೋಟಿ ಹಿಂದಕ್ಕೆ ಪಡೆದಿದ್ದಾರೆ.

ಹೂಡಿಕೆದಾರರು ₹ 777 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರೆ, ₹ 3,193 ಕೋಟಿ ಮೌಲ್ಯದ ಸಾಲಪತ್ರಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದ ಒಟ್ಟಾರೆ ಹೊರಹರಿವು
₹ 2,415 ಕೋಟಿಗಳಷ್ಟಾಗಿದೆ.

2019ರ ಸೆಪ್ಟೆಂಬರ್‌ ಬಳಿಕ ಬಂಡವಾಳ ಹೂಡಿಕೆ ಮಾಡಲಾರಂಭಿಸಿದ್ದರು. ಆದರೆ, ಜನವರಿಯಲ್ಲಿ ಇದುವರೆಗಿನ ವಹಿವಾಟನಲ್ಲಿ ಮಾರಾಟಕ್ಕೆ ಗಮನ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು