ವಿದೇಶಿ ವಿನಿಮಯ ಸಂಗ್ರಹ ದಾಖಲೆ

ಶನಿವಾರ, ಜೂಲೈ 20, 2019
28 °C

ವಿದೇಶಿ ವಿನಿಮಯ ಸಂಗ್ರಹ ದಾಖಲೆ

Published:
Updated:
Prajavani

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಸತತ ಎರಡನೇ ವಾರದಲ್ಲಿಯೂ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ.

ಜುಲೈ 5ಕ್ಕೆ ಕೊನೆಗೊಂಡ ವಾರದಲ್ಲಿ ₹15,387 ಕೋಟಿ ಹೆಚ್ಚಾಗಿ, ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 29.66 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಜೂನ್‌ 28ಕ್ಕೆ ಕೊನೆಗೊಂಡ ವಾರದಲ್ಲಿ ₹ 29.50 ಲಕ್ಷ ಕೋಟಿಗಳಿಗೆ ತಲುಪಿತ್ತು. 

ಮೀಸಲು ಸಂಗ್ರಹದಲ್ಲಿ ಅತಿ ಹೆಚ್ಚಿನ ಪಾಲು ಹೊಂದಿರುವ ವಿದೇಶಿ ಕರೆನ್ಸಿಗಳ ಸಂಗ್ರಹ ₹ 6,258 ಕೋಟಿ ಹೆಚ್ಚಾಗಿ ₹ 27.66 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ಚಿನ್ನದ ಮೀಸಲು ಸಂಗ್ರಹ ₹9,246 ಕೋಟಿ ಹೆಚ್ಚಾಗಿ ₹ 1.68 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್‌) ಭಾರತದ ಕರೆನ್ಸಿ ಸಂಗ್ರಹ ₹ 105 ಕೋಟಿಗಳಷ್ಟು ಇಳಿದಿದ್ದು, ₹ 23,046 ಕೋಟಿಗಳಿಗೆ ಇಳಿಕೆ ಕಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !