ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಿನಿಮಯ ಸಂಗ್ರಹ ಹೆಚ್ಚಳ

Last Updated 19 ಜನವರಿ 2019, 16:04 IST
ಅಕ್ಷರ ಗಾತ್ರ

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹ ಜನವರಿ 11ಕ್ಕೆ ಕೊನೆ ಗೊಂಡ ವಾರದಲ್ಲಿ ₹ 8,946 ಕೋಟಿ ಹೆಚ್ಚಾಗಿ ₹28.21 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಅದಕ್ಕೂ ಹಿಂದಿನ ವಾರದಲ್ಲಿ ₹ 19,208 ಕೋಟಿ ಹೆಚ್ಚಾಗಿ ₹ 28.11 ಲಕ್ಷ ಕೋಟಿಗೆ ತಲುಪಿತ್ತು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಾಹಿತಿ ನೀಡಿದೆ.

ರೂಪಾಯಿ ಮೌಲ್ಯ ಕುಸಿತ ನಿಯಂತ್ರಿಸಲು ಆರ್‌ಬಿಐ, ಹೆಚ್ಚಿನ ಪ್ರಮಾಣದಲ್ಲಿ ಡಾಲರ್‌ ಅನ್ನು ಮಾರಾಟ ಮಾಡುತ್ತಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳಿನಲ್ಲಿ ₹ 2.41 ಲಕ್ಷ ಕೋಟಿ ಮೌಲ್ಯದ ಡಾಲರ್‌ ಮಾರಾಟ ಮಾಡಿದೆ.

ಐಎಂಎಫ್‌ನಲ್ಲಿನ ಭಾರತದ ಕರೆನ್ಸಿ ಸಂಗ್ರಹ ₹ 18,815 ಕೋಟಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT