ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಿನಿಮಯ ಸಂಗ್ರಹ ಇಳಿಕೆ

Last Updated 2 ಸೆಪ್ಟೆಂಬರ್ 2022, 14:12 IST
ಅಕ್ಷರ ಗಾತ್ರ

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಆಗಸ್ಟ್‌ 26ಕ್ಕೆ ಕೊನೆಗೊಂಡ ವಾರದಲ್ಲಿ ₹23,880 ಕೋಟಿ ಕಡಿಮೆ ಆಗಿದ್ದು, ₹44.65 ಲಕ್ಷ ಕೋಟಿಗೆ ಇಳಿಕೆ ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಮಾಹಿತಿ ನೀಡಿದೆ.

ಆಗಸ್ಟ್‌ 19ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ಸಂಗ್ರಹವು ₹44.89 ಲಕ್ಷ ಕೋಟಿ ಇತ್ತು ಎಂದು ತಿಳಿಸಿದೆ. ಮೀಸಲು ಸಂಗ್ರಹದ ಬಹುಪಾಲನ್ನು ವಿದೇಶಿ ಕರೆನ್ಸಿಗಳು ಹೊಂದಿವೆ. ಹೀಗಾಗಿ ವಿದೇಶಿ ಕರೆನ್ಸಿಗಳ ಸಂಗ್ರಹದಲ್ಲಿ ಇಳಿಕೆ ಆದರೆ ಅದು ಒಟ್ಟಾರೆ ಮೀಸಲು ಸಂಗ್ರಹ ಮೇಲೆ ಪರಿಣಾಮ ಬೀರುತ್ತದೆ.

ವಿದೇಶಿ ಕರೆನ್ಸಿಗಳ ಸಂಗ್ರಹವು ₹20,457 ಕೋಟಿ ಕಡಿಮೆ ಆಗಿ ₹39.68 ಲಕ್ಷ ಕೋಟಿಗೆ ತಲುಪಿದೆ. ಚಿನ್ನದ ಮೀಸಲು ಸಂಗ್ರಹ ₹2,157 ಕೋಟಿ ಕಡಿಮೆ ಆಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಐಎಂಎಫ್‌) ಇರುವ ಭಾರತದ ಮೀಸಲು ಸಂಗ್ರಹವು 79 ಕೋಟಿ ಕಡಿಮೆ ಆಗಿದ್ದು, ₹39,163 ಕೋಟಿಗೆ ಇಳಿಕೆ ಕಂಡಿದೆ ಎಂದು ಆರ್‌ಬಿಐ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT