ಮಂಗಳವಾರ, ಸೆಪ್ಟೆಂಬರ್ 24, 2019
29 °C

ವಿದೇಶಿ ವಿನಿಮಯ ಸಂಗ್ರಹ ಇಳಿಕೆ

Published:
Updated:

ಮುಂಬೈ (ಪಿಟಿಐ): ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹ ಆಗಸ್ಟ್‌ 30ರ ಅಂತ್ಯಕ್ಕೆ ₹ 3,211 ಕೋಟಿ ಇಳಿಕೆ ಕಂಡು, ₹ 30.88 ಲಕ್ಷ ಕೋಟಿಗೆ ತಲುಪಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಆಗಸ್ಟ್‌ 23ಕ್ಕೆ ಕೊನೆಗೊಂಡ ವಾರ ದಲ್ಲಿ ₹ 10,440 ಕೋಟಿ ಇಳಿಕೆಯಾಗಿ ₹ 30.88 ಲಕ್ಷ ಕೋಟಿಗೆ ಇಳಿಕೆಯಾಗಿತ್ತು. ವಿದೇಶಿ ಕರೆನ್ಸಿಗಳ ಸಂಗ್ರಹ ₹ 28.51 ಲಕ್ಷ ಕೋಟಿಗೆ ಇಳಿಕೆ ಆಗಿರುವುದರಿಂದ ಒಟ್ಟಾರೆ ಸಂಗ್ರಹವೂ ತಗ್ಗಿದೆ. ಆರ್‌ಬಿಐನ ಚಿನ್ನದ ಮೀಸಲು ಸಂಗ್ರಹ ₹ 4,910 ಕೋಟಿಗಳಷ್ಟು ಹೆಚ್ಚಾಗಿ ₹ 1.98 ಲಕ್ಷ ಕೋಟಿಗೆ ಏರಿಕೆ ಯಾಗಿದೆ. ಐಎಂಎಫ್‌ನಲ್ಲಿ ಭಾರತದ ಕರೆನ್ಸಿ ಸಂಗ್ರಹ ₹ 36 ಕೋಟಿ ಇಳಿಕೆಯಾಗಿ ₹ 22,752 ಕೋಟಿಗೆ ತಲುಪಿದೆ.

Post Comments (+)