ನವದೆಹಲಿ: ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ನಿವೃತ್ತ ನಿರ್ದೇಶಕ ಪ್ರೊ.ಸುಬ್ಬಣ್ಣ ಅಯ್ಯಪ್ಪನ್ ಅವರ ನಿಗೂಢ ಸಾವಿನ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕಿದೆ ಎಂದು ಐಸಿಎಆರ್ನ ಮಾಜಿ ಸದಸ್ಯ ವೇಣುಗೋಪಾಲ್ ಬಾದರವಾಡ ಒತ್ತಾಯಿಸಿದ್ದಾರೆ.

ಈ ಕುರಿತು ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದಾರೆ.

ಅಯ್ಯಪ್ಪನ್ ಅವರ ಸಾವು ತೀವ್ರ ದುಃಖ ತರಿಸಿದೆ. ನದಿ ದಡದಲ್ಲಿ ಅವರ ಸ್ಕೂಟರ್ ಸಿಕ್ಕಿದೆ. ಹಾಗಾಗಿ, ಅವರ ಸಾವು ನಿಗೂಢ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಸಿಬಿಐ ತನಿಖೆಯ ಮೂಲಕ ಸತ್ಯವನ್ನು ಬಯಲಿಗೆಳೆಯಬೇಕಿದೆ ಎಂದು ಕೋರಿದ್ದಾರೆ.

ಅವರ ಸಾವಿನ ದುರಂತವು ಐಸಿಎಆರ್, ಎಎಸ್ಆರ್ಬಿ (ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ) ಮತ್ತು ಸಂಯೋಜಿತ ಸಂಸ್ಥೆಗಳಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರ, ಅಕ್ರಮ ನೇಮಕಾತಿ ಮತ್ತು ಅಧಿಕಾರ ದುರುಪಯೋಗಕ್ಕೆ ಕನ್ನಡಿ ಹಿಡಿಯುತ್ತದೆ ಎಂದು ಆರೋಪಿಸಿದ್ದಾರೆ.

ಸಾಂಸ್ಥಿಕ ಸಂಸ್ಥೆಗಳಲ್ಲಿನ ಹಗೆತನವು ಅವರ ಸಾವಿಗೆ ಕಾರಣವಾಗಿರಬಹುದು ಎಂದು ಕೃಷಿ ಸಮುದಾಯಗಳು ಆರೋಪಿಸುತ್ತಿವೆ. ಹಾಗಾಗಿ, ತನಿಖೆಯಿಂದ ಮಾತ್ರವೇ ಸತ್ಯ ಹೊರಬರಲು ಸಾಧ್ಯ ಎಂದು ಹೇಳಿದ್ದಾರೆ.

ಐಸಿಎಆರ್ನ ಕೆಲವು ನಿರ್ಧಾರ ಕಾನೂನುಬಾಹಿರವಾಗಿವೆ. ಮೇ 5ರಂದು ಅಯ್ಯಪ್ಪನ್ ಅವರನ್ನು ಆಡಳಿತ ಮಂಡಳಿಯಿಂದ ಯಾವುದೇ ತನಿಖೆ ನಡೆಸದೆ ಆದೇಶದ ಮೂಲಕ ಏಕಪಕ್ಷೀಯವಾಗಿ ತೆಗೆದು ಹಾಕಲಾಗಿತ್ತು ಎಂದು ದೂರಿದ್ದಾರೆ.

ಐಸಿಎಆರ್ ಕೈಗೊಂಡಿರುವ ಈ ಕಾನೂನುಬಾಹಿರ ಕ್ರಮವು ಮಂಡಳಿಯೊಳಗಿನ ಅಪಾಯಕಾರಿ ಪ್ರವೃತ್ತಿಗೆ ಸಾಕ್ಷಿಯಾಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವವರ ಧ್ವನಿಯನ್ನು ಅಡಗಿಸುತ್ತದೆ. ಆ ಮೂಲಕ ಮಂಡಳಿಯಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರವನ್ನು ರಕ್ಷಿಸುತ್ತದೆ ಎಂದು ಆರೋಪಿಸಿದ್ದಾರೆ.

ಅಯ್ಯಪ್ಪನ್ ಅವರು ಮೈಸೂರಿನ ವಿಶ್ವೇಶ್ವರ ನಗರ ಕೈಗಾರಿಕಾ ಪ್ರದೇಶದ ಅಕ್ಕಮಹಾದೇವಿ ರಸ್ತೆಯ ಮನೆಯಲ್ಲಿ ವಾಸವಾಗಿದ್ದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಬಳಿ ಕಾವೇರಿ ನದಿಯಲ್ಲಿ ಶನಿವಾರ ಅವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.