ಶುಕ್ರವಾರ, ಮೇ 29, 2020
27 °C

ದೇಶಕ್ಕೆ 25 ದಿನಗಳಲ್ಲಿ ಬಂತು ₹6,700 ಕೋಟಿ ವಿದೇಶಿ ಹೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿದೇಶಿ ಹೂಡಿಕೆದಾರರು ಆಗಸ್ಟ್‌ 1 ರಿಂದ 26ರವರೆಗೆ ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ₹ 6,700 ಕೋಟಿ ಹಣ ತೊಡಗಿಸಿದ್ದಾರೆ.

ಚಿಲ್ಲರೆ ಹಣದುಬ್ಬರ ಇಳಿಕೆ, ನಿರೀಕ್ಷಿತ ಮಟ್ಟದ ಕಾರ್ಪೊರೇಟ್‌ ಫಲಿತಾಂಶಗಳು ವಿದೇಶಿ ಹೂಡಿಕೆಗೆ ಉತ್ತೇಜನ ನೀಡಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಜುಲೈನಲ್ಲಿ ಷೇರು ಮತ್ತು ಸಾಲಪತ್ರ ಮಾರುಕಟ್ಟೆಯಲ್ಲಿ ಒಟ್ಟಾರೆ ₹ 2,300 ಕೋಟಿ ಹೂಡಿಕೆ ಮಾಡಿದ್ದರು. ಅದಕ್ಕೂ ಮೊದಲ ಅಂದರೆ ಏಪ್ರಿಲ್‌–ಜೂನ್‌ ಅವಧಿಯಲ್ಲಿ ಒಟ್ಟಾರೆ ₹ 61 ಸಾವಿರ ಕೋಟಿಯನ್ನು ಹಿಂದಕ್ಕೆ ಪಡೆದಿದ್ದರು.

‘ವಿದೇಶಿ ಬಂಡವಾಳ ಒಳಹರಿವು ಸಕಾರಾತ್ಮಕ ಬೆಳವಣಿಗೆಯಾಗಿದೆ. ಆದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೂಡಿಕೆ ಪ್ರಮಾಣ ಕಡಿಮೆ ಇದೆ. ದೇಶದ ಷೇರುಪೇಟೆಯ ಸ್ಥಿತಿ ಅನಿಶ್ಚಿತವಾಗಿದ್ದು, ವಿದೇಶಿ ಹೂಡಿಕೆದಾರರು ಎಚ್ಚರಿಕೆಯಿಂದ ವಹಿವಾಟು ನಡೆಸುತ್ತಿದ್ದಾರೆ ಎನ್ನುವುದನ್ನು ಇದು ಸೂಚಿಸುತ್ತಿದೆ’ ಎಂದು ಮಾರ್ನಿಂಗ್‌ಸ್ಟಾರ್‌ ಸಂಸ್ಥೆಯ ಹಿರಿಯ ವಿಶ್ಲೇಷಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ವಿದೇಶಿ ಬಂಡವಾಳ ಹೊರಹರಿವು 
₹ 2,100 ಕೋಟಿ 
ಈ ವರ್ಷದಲ್ಲಿ ಷೇರುಗಳ ಮಾರಾಟ

₹ 37 ಸಾವಿರ ಕೋಟಿ 
ಈ ವರ್ಷದಲ್ಲಿ ಸಾಲಪತ್ರಗಳ ಮಾರಾಟ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು