ಬುಧವಾರ, ಆಗಸ್ಟ್ 10, 2022
21 °C

ಎಫ್‌ಪಿಐ: ₹ 4,515 ಕೋಟಿ ಹೊರಹರಿವು

‍ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಜೂನ್‌ 1ರಿಂದ 16ರವರೆಗಿನ ಅವಧಿಯಲ್ಲಿ ಷೇರುಪೇಟೆಗಳಿಂದ ₹ 4,515 ಕೋಟಿ ಹಿಂದಕ್ಕೆ ಪಡೆದಿದ್ದಾರೆ.

ಇದೇ ಅವಧಿಯಲ್ಲಿ ಸಾಲಪತ್ರ ಮಾರುಕಟ್ಟೆಯಲ್ಲಿ ₹ 3,033 ಕೋಟಿ ಹೂಡಿಕೆ ಮಾಡಿದ್ದಾರೆ. ಇದರಿಂದಾಗಿ, ವಿದೇಶಿ ಬಂಡವಾಳ ಹೂಡಿಕೆದಾರರು ಮಾರುಕಟ್ಟೆಗಳಿಂದ ಹಿಂದಕ್ಕೆ ಪಡೆದ ಒಟ್ಟು ಮೊತ್ತವು ₹ 1,482 ಕೋಟಿಗಳಷ್ಟಾಗಿದೆ.

ಹೂಡಿಕೆದಾರರು ಜೂನ್‌ನಲ್ಲಿ ದೇಶದ ಮಾರುಕಟ್ಟೆಗಳಲ್ಲಿ ₹ 13,269 ಕೋಟಿ ಹೂಡಿಕೆ ಮಾಡಿದ್ದರು. ವಿದೇಶಿ ಬಂಡವಾಳ ಹೂಡಿಕೆದಾರರ ಚಟುವಟಿಕೆಯು ಬಹಳ ಚಂಚಲವಾಗಿದೆ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಹೇಳಿದ್ದಾರೆ.

ವಿದೇಶಿ ಬಂಡವಾಳ ಹೂಡಿಕೆದಾರರು ಜನವರಿ, ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ನಡೆಸಿದರು. ಕೋವಿಡ್‌ನ ಎರಡನೇ ಅಲೆಯ ಪ್ರತಿಕೂಲ ಪರಿಣಾಮದ ಬಗ್ಗೆ ಆತಂಕಕ್ಕೆ ಒಳಗಾಗಿ ಏಪ್ರಿಲ್‌ ಮತ್ತು ಮೇನಲ್ಲಿ ಮಾರಾಟಕ್ಕೆ ಗಮನ ನೀಡಿದರು. ಜೂನ್‌ನಲ್ಲಿ ಮತ್ತೆ ಷೇರುಪೇಟೆಗೆ ಮರಳಿ ಖರೀದಿ ನಡೆಸಿದ್ದರು. ಆದರೆ ಈಗ, ಜುಲೈನಲ್ಲಿ ಮತ್ತೆ ಮಾರಾಟ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇಂಡೊನೇಷ್ಯಾ ಹೊರತುಪಡಿಸಿದರೆ ಪ್ರವರ್ಧಮಾನಕ್ಕೆ ಬರುತ್ತಿರುವ ಉಳಿದೆಲ್ಲ ಮಾರುಕಟ್ಟೆಗಳಿಂದಲೂ ಬಂಡವಾಳದ ಹೊರಹರಿವು ಕಂಡುಬಂದಿದೆ ಎಂದು ಕೋಟಕ್‌ ಸೆಕ್ಯುರಿಟೀಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಶ್ರೀಕಾಂತ್‌ ಚೌಹಾಣ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು