ಫ್ರ್ಯಾಂಕ್ಲಿನ್ ಟೆಂಪಲ್ಟನ್: ಸ್ಥಗಿತಗೊಂಡ ಯೋಜನೆಗಳಲ್ಲಿ ₹ 11,907 ಕೋಟಿ

ನವದೆಹಲಿ: ಸ್ಥಗಿತಗೊಂಡಿರುವ ಆರು ಮ್ಯೂಚುವಲ್ ಫಂಡ್ ಯೋಜನೆಗಳು ಇಲ್ಲಿಯವರೆಗೆ ₹ 11,907 ಕೋಟಿ ಹಣ ಪಡೆದುಕೊಂಡಿವೆ ಎಂದು ಫ್ರ್ಯಾಂಕ್ಲಿನ್ ಟೆಂಪಲ್ಟನ್ ಮ್ಯೂಚುವಲ್ ಫಂಡ್ ಹೇಳಿದೆ.
ಏಪ್ರಿಲ್ 24ರಿಂದ ಡಿಸೆಂಬರ್ 15ರವರೆಗಿನ ಅವಧಿಯಲ್ಲಿ ಯೋಜನೆಗಳ ಅವಧಿ ಮುಕ್ತಾಯ (ಮೆಚ್ಯುರಿಟಿ), ಮುಂಗಡ ಪಾವತಿ ಹಾಗೂ ಕೂಪನ್ ಪಾವತಿಯ ಮೂಲಕ ಈ ಪ್ರಮಾಣದ ಹಣ ಸಂಗ್ರಹವಾಗಿದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.
ಯೋಜನೆಗಳನ್ನು ರದ್ದುಪಡಿಸುವ ಸಂಬಂಧ ಹೂಡಿಕೆದಾರರ ಒಪ್ಪಿಗೆ ಪಡೆಯಲು ಡಿಸೆಂಬರ್ 26ರಿಂದ 28ರವರೆಗೆ ಇ–ಮತದಾನ ನಡೆಯಲಿದೆ. 29ರಂದು ಹೂಡಿಕೆದಾರರೊಂದಿಗೆ ಸಭೆ ನಡೆಯಲಿದೆ. ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.