ಬುಧವಾರ, ಆಗಸ್ಟ್ 10, 2022
25 °C

‘ಫ್ರೀಡಂ ಸನ್‌ಫ್ಲವರ್ ಆಯಿಲ್‌ಗೆ ನಂ.1 ಪಟ್ಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆಮಿನಿ ಎಡಿಬಲ್ಸ್‌ ಆ್ಯಂಡ್‌ ಫ್ಯಾಟ್ಸ್‌ ಇಂಡಿಯಾ ಲಿಮಿಟೆಡ್ ಕಂಪನಿಯ ‘ಫ್ರೀಡಂ ರಿಫೈನ್ಡ್‌ ಸನ್‌ಫ್ಲವರ್ ಆಯಿಲ್‌’ ಬ್ರ್ಯಾಂಡ್‌ಗೆ ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಸೂರ್ಯಕಾಂತಿ ಎಣ್ಣೆ ವಿಭಾಗದಲ್ಲಿನ ಒಟ್ಟು ಮಾರಾಟದ ಆಧಾರದಲ್ಲಿ ‘ನಂ.1 ಬ್ರ್ಯಾಂಡ್‌’ ಎಂಬ ಹೆಗ್ಗಳಿಕೆ ದೊರೆತಿದೆ.

ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಒಡಿಶಾ ರಾಜ್ಯಗಳಲ್ಲಿ ಮಾತ್ರ ಅಸ್ತಿತ್ವದಲ್ಲಿ ಇದ್ದರೂ ಈ ಬ್ರ್ಯಾಂಡ್‌ಗೆ ಈ ಹೆಗ್ಗಳಿಕೆ ದೊರೆತಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

‘ಇದು ನಮ್ಮ ಗ್ರಾಹಕ ಕೇಂದ್ರಿತ ನಡೆ, ಬಲಿಷ್ಠ ವಿತರಣಾ ಜಾಲ ಮತ್ತು ಗುಣಮಟ್ಟಕ್ಕೆ ನೀಡಿದ ಗಮನದಿಂದಾಗಿ ಸಿಕ್ಕ ಫಲ. ಮುಂದಿನ ದಿನಗಳಲ್ಲಿ ನಾವು ತಮಿಳುನಾಡು ಹಾಗೂ ಕೇರಳ ಮಾರುಕಟ್ಟೆಗಳನ್ನೂ ಪ್ರವೇಶಿಸಲಿದ್ದೇವೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಚೌಧರಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು