ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜಾರಿಗೊಳಿಸಿರುವ ಕೆಲವು ಕ್ರಮಗಳಿಂದಾಗಿ ಸಾಲ ನೀಡುವ ಸಂಸ್ಥೆಗಳು ಹೊಸ ಗ್ರಾಹಕರನ್ನು ಸೆಳೆಯುವ ವೆಚ್ಚವು ಶೇ 70ರಷ್ಟು ಕಡಿಮೆ ಆಗಿದೆ ಎಂದು ಆರ್‌ಬಿಐನ ಕಾರ್ಯನಿರ್ವಾಕ ನಿರ್ದೇಶಕ ಅಜಯ್ ಕುಮಾರ್ ಚೌಧರಿ ಹೇಳಿದ್ದಾರೆ.
ಸಾಲ ನೀಡುವ ಸಂಸ್ಥೆಗಳಿಗೆ ಮಾಹಿತಿ ಸುಲಭವಾಗಿ ಲಭ್ಯವಾಗುವಂತೆ ಮಾಡುವ ವ್ಯವಸ್ಥೆಯೊಂದನ್ನು ಆರ್‌ಬಿಐನ ಅಂಗಸಂಸ್ಥೆ ರಿಸರ್ವ್ ಬ್ಯಾಂಕ್ ಇನೊವೇಷನ್ ಹಬ್ ರೂಪಿಸಿದೆ. ಹಣಕಾಸು ಸಂಸ್ಥೆಗಳಿಗೆ ಸುಲಭವಾಗಿ ಸಾಲ ವಿತರಣೆ ಮಾಡಲು ಇದು ನೆರವಾಗುತ್ತದೆ.
ಆರಂಭಿಕ ಹಂತದಲ್ಲಿ ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ಏಪ್ರಿಲ್‌ನಲ್ಲಿ ಡಿಜಿಟಲ್ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ನೀಡುವುದನ್ನು ಜಾರಿಗೊಳಿಸಲಾಯಿತು. ನಂತರ ಆಗಸ್ಟ್ 17ರಿಂದ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಗುಜರಾತ್‌ನ ಡೇರಿ ಫಾರ್ಮ್‌ಗಳಿಗೂ ವಿಸ್ತರಿಸಲಾಗಿದೆ.
ಆರಂಭಿಕ ಹಂತದಲ್ಲಿ ರೈತರಿಗೆ ಸುಲಭವಾಗಿ ಸಾಲ ಸಿಗುವಂತೆ ಮಾಡಿದ್ದರಿಂದ ಕಾರ್ಯಾಚರಣೆ ವೆಚ್ಚವು ಶೇ 70ಕ್ಕಿಂತಲೂ ಅಧಿಕ ಪ್ರಮಾಣಲದಲ್ಲಿ ಇಳಿಕೆಯಾಗಿದೆ ಎಂದು ಅಜಯ್ ಅವರು ಜಾಗತಿಕ ಫಿನ್‌ಟೆಕ್ ಸಮಾವೇಶದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.