ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌ನ ಐಷಾರಾಮಿ ಫ್ಯಾಷನ್ ಕಂಪನಿ ‘ಷನಲ್‘ ಸಿಇಒ ಆಗಿ ಕೊಲ್ಹಾಪುರದ ಲೀನಾ ನಾಯರ್

Last Updated 16 ಡಿಸೆಂಬರ್ 2021, 1:42 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಲೀನಾ ನಾಯರ್ ಅವರು ಫ್ರಾನ್ಸ್‌ನ ಐಷಾರಾಮಿ ಫ್ಯಾಷನ್ ಕಂಪನಿ ಷನಲ್‌ನ ಜಾಗತಿಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಮುಂದಿನ ತಿಂಗಳ ಅಂತ್ಯದ ಹೊತ್ತಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಜಾಗತಿಕ ಮಟ್ಟದ ಕಂಪನಿಗಳ ಮುಖ್ಯ ಸ್ಥಾನಕ್ಕೆ ಏರುತ್ತಿರುವ ಭಾರತ ಮೂಲದವರ ಸಾಲಿಗೆ ಲೀನಾ ಅವರೂ ಸೇರುತ್ತಿದ್ದಾರೆ. ಲೀನಾ ಅವರು ಇದುವರೆಗೆ ಯುನಿಲಿವರ್‌ ಕಂಪನಿಯ ಅತ್ಯಂತ ಕಿರಿಯ ವಯಸ್ಸಿನ, ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದರು. ಯುನಿಲಿವರ್ ಕಂಪನಿಯಲ್ಲಿ ಆ ಹುದ್ದೆಗೆ ಏರಿದ ಮೊದಲ ಮಹಿಳೆ ಇವರು. ಷನಲ್ ಕಂಪನಿ ಸೇರುವ ಕಾರಣಕ್ಕಾಗಿ ಲೀನಾ ಯುನಿಲಿವರ್‌ಗೆ ರಾಜೀನಾಮೆ ನೀಡಿದ್ದಾರೆ.

ಲೀನಾ ಅವರು ಬ್ರಿಟಿಷ್ ಪ್ರಜೆ. ಹೊಸ ಹುದ್ದೆಯನ್ನು ವಹಿಸಿಕೊಂಡ ನಂತರ ಲಂಡನ್‌ನಿಂದ ಕರ್ತವ್ಯ ನಿರ್ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT