ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆದೋರುವ ಸಮಸ್ಯೆಗಳು ಜನರ ಮೇಲೆ ಪರಿಣಾಮ ಬೀರದಂತೆ ಸರ್ಕಾರಗಳು ಎಚ್ಚರವಹಿಸಬೇಕು. ಆದರೆ ಇಲ್ಲಿ ವ್ಯತಿರಿಕ್ತವಾಗಿ ದೇಶ ಅಥವಾ ವಿಶ್ವಮಟ್ಟದಲ್ಲಿ ಉದ್ಭವಿಸುವ ಸಮಸ್ಯೆಗಳಿಂದ ಉದ್ಯಮಿಗಳು ಹಾಗೂ ಶ್ರೀಮಂತರಿಗಿಂತ ಜನರಿಗೆ ಹೆಚ್ಚು ನಷ್ಟವುಂಟಾಗುತ್ತಿರುವುದು ನಮ್ಮ ದುರ್ದೈವ.

ಇಂಧನ ಮಿತ ಬಳಕೆ ಮತ್ತು ಅನಾವಶ್ಯಕ ಸಂಚಾರ ನಿಯಂತ್ರಿಸಲು ಪ್ರಧಾನಿ ನೀಡಿರುವ ಸೂಚನೆ ಭವಿಷ್ಯದಲ್ಲಿ ಎದುರಾಗಬಹುದಾದ ಪೆಟ್ರೋಲಿಯಂ ಉತ್ಪನ್ನಗಳ ತೀವ್ರ ಅಭಾವದ ಮುನ್ಸೂಚನೆಯಂತಿದೆ. ಪ್ರಸ್ತುತ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಗಗನಕ್ಕೇರಿರುವುದರಿಂದ ವ್ಯಾಪಾರಿಗಳು ತಮ್ಮ ವೃತ್ತಿಪರ ಉಳಿವಿನ ದೃಷ್ಟಿಯಿಂದ ಅನಿವಾರ್ಯವಾಗಿ ಸರಕುಗಳ ಬೆಲೆ ಏರಿಕೆ ಮಾಡಬೇಕಾಗುತ್ತದೆ. ಇದರ ನೇರ ಪರಿಣಾಮ ಗ್ರಾಹಕರ ಸಂಖ್ಯೆ ಕ್ಷೀಣಿಸಿ, ವ್ಯಾಪಾರ ವಲಯದಲ್ಲಿ ತೀವ್ರ ಆರ್ಥಿಕ ನಷ್ಟ ಸಂಭವಿಸುವ ಆತಂಕ ಎದುರಾಗಿದೆ.

ಸಕಾಲಕ್ಕೆ ಮಳೆಯಾಗದೆ ಕೃಷಿ ವಲಯ ಸಂಪೂರ್ಣ ನಲುಗಿಹೋಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕಷ್ಟಪಟ್ಟು ದುಡಿದ ಹಣವನ್ನೆಲ್ಲ ಇಂಧನಕ್ಕೇ ವ್ಯಯಿಸಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ. ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ಟ್ರ್ಯಾಕ್ಟರ್ ಮಾಲೀಕರು ಹಾಗೂ ಮೋಟಾರ್ ಅಳವಡಿಸುವ ಕಾರ್ಮಿಕರು ಇಂಧನ ದರ ಏರಿಕೆಯ ನೆಪವೊಡ್ಡಿ ತಮ್ಮ ಸೇವಾ ದರವನ್ನು ಗಣನೀಯವಾಗಿ ಹೆಚ್ಚಿಸಿದ್ದಾರೆ. ಹೀಗೆ ಪ್ರತಿಯೊಂದು ಅಗತ್ಯ ವಸ್ತು ಹಾಗೂ ಸೇವೆಗಳ ಬೆಲೆಗಳು ನಿರಂತರವಾಗಿ ಹೆಚ್ಚಾಗುತ್ತಿದ್ದರೆ, ದೇಶದ ಬೆನ್ನೆಲುಬಾದ ರೈತರು ಜೀವನ ನಡೆಸುವುದು ಹೇಗೆ? ಈ ಅನಿಯಂತ್ರಿತ ದರ ಹೆಚ್ಚಳದಿಂದಾಗಿ ಕೃಷಿಕರು ಸಂಪೂರ್ಣವಾಗಿ ಕಂಗಾಲಾಗಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಮನೆ ಖರ್ಚು ನಿಯಂತ್ರಿಸುವುದೇ ಕಷ್ಟವಾಗಿದೆ. ಸರ್ಕಾರ ಸಾಮಾನ್ಯ ಜನರ ಪರಿಸ್ಥಿತಿ ಗಮನಿಸಿ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಬೇಕು. ಜಾಗತಿಕ ಮಾರುಕಟ್ಟೆ ಪರಿಣಾಮದಿಂದ ಇಂಧನ ದರ ಏರಿಕೆ ಆಗುವುದು ಸಹಜ. ಆದರೆ ಸರ್ಕಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಪಡಿಸಿದರೆ ಜನರಿಗೆ ಸ್ವಲ್ಪಮಟ್ಟಿನ ನಿರಾಳತೆ ಸಿಗಬಹುದು.

ಇಂಧನ ದರ ಏರಿಕೆಯಿಂದ ರೈತರಿಗೆ ಕೃಷಿ ವೆಚ್ಚ ಹೆಚ್ಚಾಗಿದೆ. ಇಂಧನದ ಮೇಲೆ ಅವಲಂಬನೆ ಕಡಿಮೆ ಮಾಡಿ ವಿದ್ಯುತ್ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಸಮಯ ಬಂದಿದೆ ಎಂಬ ಸಂದೇಶ ಈ ಬೆಲೆ ಏರಿಕೆಯಿಂದ ಸಿಗುತ್ತಿದೆ. ತೈಲ ಬೆಲೆ ಏರಿಕೆಯಿಂದ ದಿನನಿತ್ಯದ ಸಾರಿಗೆ ಧರ ಹೆಚ್ಚಳವಾಗುವ ಸಾಧ್ಯತೆ ಇದೆ. ಆದರೆ ಬಿಸಿಲಿನ ತಾಪಕ್ಕಿಂತ ಇಂಧನ ಬೆಲೆಯ ತಾಪ ಎಲ್ಲರನ್ನು ಸುಡುತ್ತದೆ.

ಇಂಧನ ದರ ಏರಿಕೆಯು ಜನರ ಬಹುಪಾಲು ದುಡಿಮೆಯನ್ನು ಕಸಿದುಕೊಳ್ಳುವ ಹೊಸ ಮಾದರಿ ಶೋಷಣೆಯಾಗಿದೆ. ಇಂಧನ ಬೆಲೆ ಏರಿಕೆಯಿಂದ ಅಗತ್ಯ ಸರಕುಗಳ ಬೆಲೆಗಳು ಊಹಿಸಲಾರದಷ್ಟು ತುಟ್ಟಿಯಾಗಲಿವೆ. ಶ್ರೀಮಂತರಿಗೆ ಇದರ ಕಾವು ತಟ್ಟುವುದು ಕಡಿಮೆ. ಆದರೆ ಬಡವರು, ಕೂಲಿ ಕಾರ್ಮಿಕರು, ಖಾಸಗಿ ಶಾಲಾ ನೌಕರರು, ಸೇರಿದಂತೆ ಎಲ್ಲರ ಬದುಕು ಅಸಹನೀಯವಾಗುವುದು.

ಅಸ್ಗರ್ ನೈನ್, ಖಾಸಗಿ ಶಾಲಾ ಶಿಕ್ಷಕ, ಮಧುಗಿರಿ

ಯುದ್ಧದ ಕಾರಣಕ್ಕೆ ದಿಢೀರನೆ ಕೈಸುಡುವಷ್ಟರ ಮಟ್ಟಿಗೆ ಪೆಟ್ರೋಲ್, ಡೀಸೆಲ್ ಬೆಲೆ ದರ ಏರಿಕೆ ಮಾಡಿರುವುದು ಎಡವಿ ಬಿದ್ದವನ ಮೇಲೆ ಕಲ್ಲು ಎತ್ತಿ ಹಾಕಿದಂತಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಇಂಧನ ಬೆಲೆ ಏರಿಕೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡವರ ಮೇಲೆ ತೆರಿಗೆ ಹಾಕುವ ಬದಲು ಕಾರ್ಪೂರೇಟ್ ತೆರಿಗೆ ಹೆಚ್ಚಿಸಲಿ.

ಜನರ ದಿನ ಬಳಕೆ ವಸ್ತುಗಳ ಬೆಲೆ ಕೂಡ ದುಬಾರಿಯಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಘರ್ಷದಲ್ಲಿ ಜನರ ಹಿತಾಸಕ್ತಿಯನ್ನೇ ಕಡೆಗಣಿಸಲಾಗಿದೆ. ರೈತರು ಬಳಸುವ ಕೃಷಿ ವಸ್ತು ಮತ್ತು ರಸಗೊಬ್ಬರಗಳ ಬೆಲೆಯೂ ತುಟ್ಟೆಯಾಗಿದೆ. ಆದರೆ ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲದಾಗಿದೆ.

ರಂಗನಾಥ, ಅಕ್ಕಳಸಂದ್ರ ಗೊಲ್ಲಹಟ್ಟಿ ಬಾರೆ, ತುರುವೇಕೆರೆ

ಪದೇ ಪದೇ ತೈಲ ಬೆಲೆ ಹೆಚ್ಚಳ ಜನ ಸಾಮಾನ್ಯರಿಗೆ ಹೊರೆ. ಅದರಲ್ಲೂ ಆಟೊ, ಕ್ಯಾಬ್ ಸೇರಿದಂತೆ ಇಂಧನವನ್ನೇ ನಂಬಿ ಬದುಕು ಕಟ್ಟಿಕೊಂಡಿರುವವರ ಜೀವನ ತುಂಬಾ ಕಷ್ಟವಾಗಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ತೈಲ ಬೆಲೆ ಹೆಚ್ಚಳ ಬಾಣಲಿಯಿಂದ ಬೆಂಕಿಗೆ ಹಾಕಿದಂತಾಗುತ್ತದೆ.

ಯುದ್ಧ ಅನಿಶ್ಚಿತವಾಗಿರುವುದರಿಂದ ತೈಲ ಬೆಲೆ ಏರಿಕೆ ಅನಿವಾರ್ಯ. ತೈಲ ಬೆಲೆ ಏರಿಕೆ ಕೃಷಿ, ಸಂಚಾರ ಸೇರಿದಂತೆ ಎಲ್ಲ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಯುದ್ಧ ಮುಗಿದ ಮೇಲೆ ಯಥಾಸ್ಥಿತಿಗೆ ಮರಳಲಿದೆ. ಅಲ್ಲಿಯವರೆಗೆ ಸಂಚಾರ ಸೇರಿದಂತೆ ಇಂಧನದ ಮಿತ ಬಳಕೆ ಅನಿವಾರ್ಯ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ದಿನ ಬಳಕೆ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಡ, ಮದ್ಯಮ ವರ್ಗದ ಜನತೆ ಜೀವನ ನಡೆಸುವುದೂ ಕಷ್ಟವಾಗುತ್ತಿದೆ. ಇದೀಗ ಶಾಲಾ ಕಾಲೇಜುಗಳ ಆರಂಭದ ಸಮಯವಾಗಿರುವು ದರಿಂದ ಶಾಲಾ ಶುಲ್ಕ, ಪುಸ್ತಕ, ಇತ್ಯಾದಿ ಕೊಳ್ಳುವುದರ ಜೊತೆಗೆ ಬೆಲೆ ಏರಿಕೆ ಇನ್ನಿಲ್ಲದ ಸಮಸ್ಯೆಯನ್ನು ತಂದೊಡ್ಡಿದೆ.

ಇಂಧನ ಬೆಲೆ ಹೆಚ್ಚುತ್ತಿರುವುದರಿಂದ ಕೇವಲ ವಾಹನ ಮಾಲೀಕರಿಗಷ್ಟೇ ಸಮಸ್ಯೆಯಾಗುತ್ತಿಲ್ಲ. ಇದರ ಬಿಸಿ ನೇರವಾಗಿ ಸಾಮಾನ್ಯ ಜನತೆಗೆ ತಟ್ಟುತ್ತಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕೆಂದರೆ ಆಟೊ, ಬಾಡಿಗೆ ವಾಹನಗಳಲ್ಲಿ ಹೆಚ್ಚಿನ ಬಾಡಿಗೆ ಕೊಡಬೇಕಿದೆ. ಇನ್ನು ಖಾಸಗಿ ವಾಹನಗಳಲ್ಲಿ ದೂರದೂರುಗಳಿಗೆ ಹೋಗುವುದು ಸವಾಲಾಗಿ ಪರಿಣಮಿಸಿದೆ. ಸರ್ಕಾರಗಳು ತೆರಿಗೆ ಕಡಿಮೆ ಮಾಡಿ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-17-603901972

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.