ಏರಿಕೆ ಹಾದಿಯಲ್ಲಿ ಇಂಧನ ದರ

7

ಏರಿಕೆ ಹಾದಿಯಲ್ಲಿ ಇಂಧನ ದರ

Published:
Updated:

ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಇಂಧನಗಳ ಬೆಲೆಯನ್ನು ಏರಿಸುತ್ತಲೇ ಇರುವುದರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಮತ್ತೆ ತುಟ್ಟಿಯಾಗುತ್ತಿವೆ.

ಗುರುವಾರವಷ್ಟೇ ಕೇಂದ್ರ ಸರ್ಕಾರವು ಎಕ್ಸೈಸ್‌ ಸುಂಕ ಕಡಿತಗೊಳಿಸಿತ್ತು. ತೈಲ ಮಾರಾಟ ಸಂಸ್ಥೆಗಳು ಪ್ರತಿ ಲೀಟರ್‌ಗೆ ₹ 1ರಂತೆ ವೆಚ್ಚ ಭರಿಸಿಕೊಳ್ಳಲು ನಿರ್ದೇಶನ ನೀಡಿತ್ತು. ಇದಕ್ಕೆ ಪೂರಕವಾಗಿ ಕೆಲ ರಾಜ್ಯ ಸರ್ಕಾರಗಳೂ ಮಾರಾಟ ತೆರಿಗೆ ಅಥವಾ ವ್ಯಾಟ್‌ ಕಡಿತಗೊಳಿಸಿದ್ದವು. ಇದರಿಂದ ದರಗಳು ಅಗ್ಗವಾಗಿದ್ದವು.

ಆದರೆ, ತೈಲ ಮಾರಾಟ ಸಂಸ್ಥೆಗಳು ಈ ಬೆಳವಣಿಗೆಯ ಹೊರತಾಗಿಯೂ ಪ್ರತಿ ದಿನ ದರ ಪರಿಷ್ಕರಣೆ ಮಾಡುತ್ತಿವೆ. ದಿನದಿಂದ ದಿನಕ್ಕೆ ಪೈಸೆಗಳ ಲೆಕ್ಕದಲ್ಲಿ ಬೆಲೆ ಏರಿಕೆಯಾಗುತ್ತಲೇ ಇದೆ. ಪೆಟ್ರೋಲ್‌ ಬೆಲೆಯನ್ನು ಶುಕ್ರವಾರ ಮತ್ತು ಶನಿವಾರ ಕ್ರಮವಾಗಿ 18 ಮತ್ತು 14 ಪೈಸೆಗಳಷ್ಟು ಹೆಚ್ಚಿಸಲಾಗಿದೆ. ಶನಿವಾರ ಇದ್ದ ದರಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಭಾನುವಾರ ಪೆಟ್ರೋಲ್‌ ದರ 14 ಪೈಸೆ, ಡೀಸೆಲ್‌ ದರ 29 ಪೈಸೆಗಳಷ್ಟು ಏರಿಕೆಯಾಗಿದೆ. ಪೆಟ್ರೋಲ್‌ ಒಂದು ಲೀಟರಿಗೆ ₹ 82.46 ಹಾಗೂ ಡೀಸೆಲ್‌ ಒಂದು ಲೀಟರಿಗೆ
₹ 73.90ರಂತೆ ಮಾರಾಟವಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !