ಬುಧವಾರ, ಮೇ 25, 2022
22 °C

ಕಂಪನಿಗಳ ಬಾಂಡ್‌ ಮಾರಾಟದಿಂದ ₹ 5.88 ಲಕ್ಷ ಕೋಟಿ ಬಂಡವಾಳ ಸಂಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಗಳು ಕಾರ್ಪೊರೇಟ್‌ ಬಾಂಡ್‌ ಮಾರಾಟ ಮಾಡುವ ಮೂಲಕ 2021–22ನೇ ಹಣಕಾಸು ವರ್ಷದಲ್ಲಿ ₹ 5.88 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಿವೆ.

2015–16ನೇ ಹಣಕಾಸು ವರ್ಷದ ಬಳಿಕ ಸಂಗ್ರಹ ಆಗಿರುವ ಅತ್ಯಂತ ಕನಿಷ್ಠ ಮೊತ್ತ ಇದಾಗಿದೆ. ಆ ಅವಧಿಯಲ್ಲಿ ₹ 4.58 ಲಕ್ಷ ಕೋಟಿ ಸಂಗ್ರಹ ಆಗಿತ್ತು.

2020–21ನೇ ಹಣಕಾಸು ವ‌ರ್ಷದಲ್ಲಿ ₹ 7.72 ಲಕ್ಷ ಕೋಟಿ ಬಂಡವಾಳ ಸಂಗ್ರಹ ಆಗಿತ್ತು. ಇದಕ್ಕೆ ಹೋಲಿಸಿದರೆ 2021–22ರಲ್ಲಿ ಶೇಕಡ 24ರಷ್ಟು ಕಡಿಮೆ ಸಂಗ್ರಹ ಆದಂತಾಗಿದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಈ ಮಾಹಿತಿ ನೀಡಿದೆ.

ಸರ್ಕಾರಿ ಸಾಲ ಹೆಚ್ಚಾಗದೇ ಇದ್ದರೆ ಮತ್ತು ಬಡ್ಡಿ ದರಗಳು ಪ್ರತಿಕೂಲವಾಗಿ ಪರಿಣಮಿಸದೆ ಇದ್ದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ (2022–23) ಕಂಪನಿಗಳು ಬಾಂಡ್‌ಗಳ ಮೂಲಕ ಬಂಡವಾಳ ಸಂಗ್ರಹಿಸುವುದು ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆರ್ಥಿಕ ಮುನ್ನೋಟ ಸುಧಾರಿಸುತ್ತಿರುವುದರಿಂದ ಸಾಲಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ ಎಂದೂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು