ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ: 53.98 ಲಕ್ಷ ವಿವರ ಸಲ್ಲಿಕೆ

Last Updated 31 ಜುಲೈ 2022, 19:18 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವೇತನದಾರರು ತಮ್ಮ 2021–22ನೇ ಸಾಲಿನ ಆದಾಯ ತೆರಿಗೆ ವಿವರ ಸಲ್ಲಿಸಲು ಕಡೆಯ ದಿನವಾಗಿದ್ದ ಜುಲೈ 31ರಂದು ಅಂದಾಜು 53.98 ಲಕ್ಷ ಆದಾಯ ತೆರಿಗೆ ವಿವರಗಳು ಸಲ್ಲಿಕೆಯಾಗಿವೆ.

ಜುಲೈ 30ರವರೆಗೆ 5.10 ಕೋಟಿಗಿಂತ ಹೆಚ್ಚಿನ ಆದಾಯ ತೆರಿಗೆ ವಿವರಗಳು ಸಲ್ಲಿಕೆಯಾಗಿವೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಭಾನುವಾರ ರಾತ್ರಿ 8 ಗಂಟೆಯವರೆಗೆ 53.98 ಲಕ್ಷ ವಿವರಗಳು ಸಲ್ಲಿಕೆಯಾಗಿವೆ. ಕಡೆಯ ಒಂದು ತಾಸಿನ ಅವಧಿಯಲ್ಲಿ 4.95 ಲಕ್ಷ ವಿವರಗಳು ಸಲ್ಲಿಕೆಯಾಗಿವೆ ಎಂದು ಇಲಾಖೆಯು ಟ್ವೀಟ್ ಮಾಡಿದೆ.

ಹಿಂದಿನ ವರ್ಷದಲ್ಲಿ (2020–21) ಆದಾಯ ತೆರಿಗೆ ವಿವರ ಸಲ್ಲಿಸಲು ಡಿಸೆಂಬರ್ 31ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆಗ ಅಂದಾಜು 5.89 ಕೋಟಿ ವಿವರಗಳು ಸಲ್ಲಿಕೆಯಾಗಿದ್ದವು.

ವಿಳಂಬ ಶುಲ್ಕವನ್ನು ತಪ್ಪಿಸಲು ಗಡುವಿನ ಒಳಗೆ ವಿವರ ಸಲ್ಲಿಸಬೇಕು ಎಂದು ಇಲಾಖೆಯು ಮತ್ತೆ ಮತ್ತೆ ಹೇಳುತ್ತ ಬಂದಿದೆ.

ತೆರಿಗೆ ನಿಯಮಗಳ ಅನ್ವಯ, ₹ 5 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರು ಆಗಸ್ಟ್‌ 1ರಿಂದ ಡಿಸೆಂಬರ್ 31ರೊಳಗೆ ವಿವರ ಸಲ್ಲಿಸಿದರೆ ₹ 5,000 ವಿಳಂಬ ಶುಲ್ಕ ಪಾವತಿಸಬೇಕು.

₹ 5 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರು ಗಡುವಿನ ನಂತರ ವಿವರ ಸಲ್ಲಿಸಿದರೆ ₹ 1,000 ವಿಳಂಬ ಶುಲ್ಕ ಪಾವತಿ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT