ನವದೆಹಲಿ: 2025–26ರ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ನ (ಗೇಲ್) ನಿವ್ವಳ ಲಾಭದಲ್ಲಿ ಶೇ 38ರಷ್ಟು ಇಳಿಕೆಯಾಗಿದೆ.

2024–25ರ ಮಾರ್ಚ್ ತ್ರೈಮಾಸಿಕದಲ್ಲಿ ₹2,049 ಕೋಟಿ ಲಾಭ ಗಳಿಸಿತ್ತು. ಇದು ಈ ಬಾರಿ ₹1,262 ಕೋಟಿಗೆ ಇಳಿದಿದೆ. ಪಶ್ಚಿಮ ಏಷ್ಯಾದ ಸಂಘರ್ಷದಿಂದ ಎಲ್ಎನ್ಜಿ, ಇಂಧನ ಪೂರೈಕೆಗೆ ಅಡಚಣೆ ಉಂಟಾಗಿದೆ. ಇದು ಕಂಪನಿಯ ಲಾಭದ ಮೇಲೆ ಪರಿಣಾಮ ಬೀರಿದೆ ಎಂದು ಗೇಲ್ ಷೇರುಪೇಟೆಗೆ ತಿಳಿಸಿದೆ.

ಕಂಪನಿಯ ವರಮಾನವು ₹34,797 ಕೋಟಿಗೆ ಇಳಿದಿದೆ. ತೆರಿಗೆ, ಬಡ್ಡಿ, ಸಾಲ ತೀರುವಳಿ ಪೂರ್ವದ ವರಮಾನ (ಇಬಿಐಟಿಡಿಎ) ₹3,335 ಕೋಟಿಯಿಂದ ₹2,175 ಕೋಟಿಗೆ ಇಳಿದಿದೆ.

ಕಳೆದ ಪೂರ್ಣ ಆರ್ಥಿಕ ವರ್ಷದಲ್ಲಿ ಕಂಪನಿಯ ಲಾಭವು ₹6,968 ಕೋಟಿಗೆ ಇಳಿದಿದೆ. 2024–25ರಲ್ಲಿ ಇದು ₹11,312 ಕೋಟಿಯಷ್ಟಾಗಿತ್ತು.

ಪ್ರತಿ ಷೇರಿಗೆ 50 ಪೈಸೆ ಅಂತಿಮ ಲಾಭಾಂಶ ನೀಡಲು ಕಂಪನಿಯ ಆಡಳಿತ ಮಂಡಳಿಯು ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.