ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸರ್ಗಿಕ ಅನಿಲ ಬೆಲೆ ಏರಿಕೆ: ಸಿಎನ್‌ಜಿ ದುಬಾರಿ ಸಾಧ್ಯತೆ

Last Updated 30 ಸೆಪ್ಟೆಂಬರ್ 2022, 16:28 IST
ಅಕ್ಷರ ಗಾತ್ರ

ನವದೆಹಲಿ: ವಿದ್ಯುತ್ ಉತ್ಪಾದನೆ, ರಸಗೊಬ್ಬರ ತಯಾರಿಕೆಯಲ್ಲಿ ಬಳಸುವ ನೈಸರ್ಗಿಕ ಅನಿಲದ ಬೆಲೆಯನ್ನು ಕೇಂದ್ರ ಸರ್ಕಾರವು ಶೇಕಡ 40ರಷ್ಟು ಹೆಚ್ಚಿಸಿದೆ. ಈ ನೈಸರ್ಗಿಕ ಅನಿಲವನ್ನು ಸಿಎನ್‌ಜಿ ಆಗಿ ಪರಿವರ್ತಿಸಲಾಗುತ್ತದೆ.

2019ರ ಏಪ್ರಿಲ್‌ ನಂತರ ನೈಸರ್ಗಿಕ ಅನಿಲದ ಬೆಲೆ ಏರಿಕೆ ಆಗುತ್ತಿರುವುದು ಇದು ಮೂರನೆಯ ಬಾರಿ. ಈ ಏರಿಕೆಯ ಪರಿಣಾಮವಾಗಿ ಸಿಎನ್‌ಜಿ ಬೆಲೆ ಹಾಗೂ ಕೊಳವೆ ಮೂಲಕ ಪೂರೈಸುವ ಅಡುಗೆ ಅನಿಲದ ಬೆಲೆಯಲ್ಲಿ ಹೆಚ್ಚಳ ಆಗಬಹುದು ಎನ್ನಲಾಗಿದೆ.

ನೈಸರ್ಗಿಕ ಅನಿಲದ ಬೆಲೆ ಹೆಚ್ಚಳವು ಹಣದುಬ್ಬರ ಇನ್ನಷ್ಟು ಏರುವುದಕ್ಕೆ ಇಂಬು ಕೊಡಬಹುದು. ವಿದ್ಯುತ್ ಉತ್ಪಾದನೆಯ ವೆಚ್ಚ ಜಾಸ್ತಿ ಆಗುತ್ತದೆಯಾದರೂ, ದೇಶದಲ್ಲಿ ನೈಸರ್ಗಿಕ ಅನಿಲದಿಂದ ಉತ್ಪಾದನೆ ಆಗುವ ವಿದ್ಯುತ್ತಿನ ಪ್ರಮಾಣವೇ ಕಡಿಮೆ ಇರುವ ಕಾರಣ ಗ್ರಾಹಕರಿಗೆ ಹೆಚ್ಚಿನ ಹೊರೆ ಆಗಲಿಕ್ಕಿಲ್ಲ.

ರಸಗೊಬ್ಬರ ತಯಾರಿಕಾ ವೆಚ್ಚವು ಜಾಸ್ತಿ ಆಗುತ್ತದೆ. ಆದರೆ, ಕೇಂದ್ರ ಸರ್ಕಾರವು ರಸಗೊಬ್ಬರಕ್ಕೆ ಸಬ್ಸಿಡಿ ನೀಡುವ ಕಾರಣ ರೈತರು ಕೊಡಬೇಕಿರುವ ಬೆಲೆ ಹೆಚ್ಚಾಗುವ ಸಾಧ್ಯತೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT