ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಪ್ರಗತಿ ಶೇ 7.3ರಷ್ಟು ನಿರೀಕ್ಷೆ: ಚೀನಾ ಹಿಂದಿಕ್ಕಲಿದೆ ಭಾರತ

Last Updated 9 ಜನವರಿ 2019, 20:00 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತದ ಆರ್ಥಿಕತೆ (ಜಿಡಿಪಿ) 2018–19ರಲ್ಲಿ ಶೇ 7.3ರಷ್ಟು ಬೆಳವಣಿಗೆ ಕಾಣಲಿದ್ದು, ಚೀನಾವನ್ನು ಹಿಂದಿಕ್ಕಲಿದೆಎಂದು ವಿಶ್ವ ಬ್ಯಾಂಕ್‌ ಹೇಳಿದೆ.

ಚೀನಾದ ಪ್ರಗತಿ ಶೇ 6.5ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ.

ಬಂಡವಾಳ ಹೂಡಿಕೆ ಮತ್ತು ಗ್ರಾಹಕರ ವೆಚ್ಚದಲ್ಲಿ ಏರಿಕೆ ಕಂಡುಬರುತ್ತಿದೆ. ಬ್ಯಾಂಕ್‌ಗಳಿಗೆ ಬಂಡವಾಳ ನೆರವು, ಜಿಎಸ್‌ಟಿಯಂತಹ ಸಾಂಸ್ಥಿಕ ಸುಧಾರಣಾ ಕ್ರಮಗಳಿಂದ ದೇಶಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಉತ್ತಮ ಪ್ರಗತಿ ಸಾಧಿಸಲಿದೆ.

ಜಿಎಸ್‌ಟಿ ಮತ್ತು ನೋಟು ರದ್ದತಿಯಿಂದ2017ರಲ್ಲಿ ಭಾರತದ ಜಿಡಿಪಿ ಶೇ 6.7ರಷ್ಟು ಬೆಳವಣಿಗೆ ಕಂಡಿತ್ತು. ಇದು ಚೀನಾದ ಶೇ 6.9ರಷ್ಟು ಬೆಳವಣಿಗೆಗಿಂತಲೂ ಕಡಿಮೆಯಾಗಿತ್ತು. ಆದರೆ, 2018ರಲ್ಲಿ ಚೀನಾವನ್ನೂ ಹಿಂದಿಕ್ಕಿ ಭಾರತ ಮುಂದುವರಿಯಲಿದೆ ಎಂದು ವಿಶ್ವಬ್ಯಾಂಕ್‌ ಹೇಳಿದೆ.

ಜಿಎಸ್‌ಟಿಯಿಂದ ಅನೌಪಚಾರಿಕ ವಲಯಗಳು ಔಪಚಾರಿಕ ವಲಯಗಳಾಗಿ ಬದಲಾಗಲು ಉತ್ತೇಜನ ದೊರೆಯುತ್ತಿದೆ. ಶೇ 7ರಷ್ಟು ಪ್ರಗತಿ ಸಾಧಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಸ್ವಲ್ಪ ಪ್ರಯತ್ನ ಪಟ್ಟರೆ ಅದಕ್ಕಿಂತಲೂ ಹೆಚ್ಚಿನ ಬೆಳವಣಿಗೆ ಸಾಧಿಸಬಹುದು.

ಜಾಗತಿಕ ಆರ್ಥಿಕತೆಗೆ ಮೋಡ ಮುಸುಕಲಿದೆ
ಜಾಗತಿಕ ಆರ್ಥಿಕ ಬೆಳವಣಿಗೆಯು ಮೋಡ ಕವಿದ ವಾತಾವರಣದಂತಾಗಿದೆ ಎಂದು ವಿಶ್ವ ಬ್ಯಾಂಕ್‌ಸದ್ಯದ ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡಿದೆ.

ಜಾಗತಿಕ ಆರ್ಥಿಕತೆ ಮಂದಗತಿಯ ಬೆಳವಣಿಗೆ ಕಾಣುತ್ತಿದ್ದು, ಅಪಾಯದಲ್ಲಿದೆ. ಜಾಗತಿಕ ಆರ್ಥಿಕತೆಯ ಮೇಲೆ ಮೋಡ ಮುಸುಕುವ ಸಂಭವ ಹೆಚ್ಚಾಗಿದೆ. 2018ರಲ್ಲಿ ಶೇ 3 ರಷ್ಟು 2019ರಲ್ಲಿ ಶೆ 2.9ರಷ್ಟು ಅಲ್ಪ ಪ್ರಗತಿಯನ್ನಷ್ಟೇ ಕಾಣಲಿದೆ ಎಂದು ಹೇಳಿದೆ.

ಅಂತರರಾಷ್ಟ್ರೀಯ ವ್ಯಾಪಾರ ಮತ್ತು ತಯಾರಿಕಾ ಚಟುವಟಿಕೆಯ ಬೆಳವಣಿಗೆ ತಗ್ಗಿದೆ. ವಾಣಿಜ್ಯ ಸಮರ, ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಮುಖ ದೇಶಗಳ ಹಣಕಾಸು ಮಾರುಕಟ್ಟೆಯಲ್ಲಿನ ಒತ್ತಡದಿಂದಾಗಿ ಜಿಡಿಪಿ ನಿರೀಕ್ಷಿತ ಮಟ್ಟದ ಪ್ರಗತಿ ಕಾಣುತ್ತಿಲ್ಲ ಎಂದು ತಿಳಿಸಿದೆ.

ಅಭಿವೃದ್ಧಿ ಹೊಂದಿದ ದೇಶಗಳ ಜಿಡಿಪಿ ಪ್ರಗತಿ ಈ ವರ್ಷ ಶೇ 2ರಷ್ಟು ಇಳಿಕೆಯಾಗಲಿದ್ದು ಶೇ 4ಕ್ಕೆ ತಗ್ಗುವ ಸಂಭವ ಇದೆ ಎಂದು ಹೇಳಿದೆ.

*
ಭಾರತದ ಪ್ರಗತಿ ಮುನ್ನೋಟ ಉತ್ತಮವಾಗಿದೆ.ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯಲಿದೆ.
-ಆಯಾನ್‌ ಕೊಸೆ, ವಿಶ್ವ ಬ್ಯಾಂಕ್‌ನ ನಿರ್ದೆಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT