ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ವೃದ್ಧಿ ದರ ಕುಂಠಿತ

Last Updated 28 ಫೆಬ್ರುವರಿ 2019, 14:24 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಆರ್ಥಿಕ ವೃದ್ಧಿ ದರವು ಅಕ್ಟೋಬರ್‌ – ಡಿಸೆಂಬರ್ ಅವಧಿಯಲ್ಲಿ ಶೇ 6.6ರಷ್ಟು ಬೆಳವಣಿಗೆ ಕಂಡಿದ್ದು, 15 ತಿಂಗಳಲ್ಲಿನ ಕಡಿಮೆ ವೃದ್ಧಿ ದರ ಇದಾಗಿದೆ.

ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಹಿಂದಿನ ಹಣಕಾಸು ವರ್ಷದ 3ನೆ ತ್ರೈಮಾಸಿಕದಲ್ಲಿ ಸ್ಥಿರ ಬೆಲೆ (2018–19) ಲೆಕ್ಕದಲ್ಲಿ ಶೇ 7.7ರಷ್ಟು ದಾಖಲಾಗಿತ್ತು. ಮೊದಲ ಮತ್ತು ದ್ವಿತೀಯ ತ್ರೈಮಾಸಿಕದಲ್ಲಿನ ಡಿಜಿಪಿ ವೃದ್ಧಿ ದರವು ಕ್ರಮವಾಗಿ ಶೇ 8 ಮತ್ತು ಶೇ 7ರಷ್ಟಿತ್ತು ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿಯು (ಸಿಎಸ್‌ಒ) ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿನ ಆರ್ಥಿಕ ವೃದ್ಧಿ ದರವು ಶೇ 7ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಹಿಂದಿನ ವರ್ಷ ಇದು ಶೇ 7.2ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT