ಶನಿವಾರ, ಡಿಸೆಂಬರ್ 7, 2019
25 °C

ಜಿಡಿಪಿ ಕುಸಿತ: ಫಿಕ್ಕಿ ಆತಂಕ

Published:
Updated:

ನವದೆಹಲಿ: ದೇಶದಲ್ಲಿ ಬಂಡವಾಳ ಹೂಡಿಕೆ ಮತ್ತು ಗ್ರಾಹಕ ಬೇಡಿಕೆ ಕುಸಿದಿದೆ ಎನ್ನುವುದನ್ನು ಆರ್ಥಿಕ ವೃದ್ದಿ ದರ ಸೂಚಿಸುತ್ತಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ತಿಳಿಸಿದೆ.

ಹಣಕಾಸು ವರ್ಷದ ಏಪ್ರಿಲ್‌–ಜೂನ್‌ ಅವಧಿಯ ಜಿಡಿಪಿ ದರದ ಬೆಳವಣಿಗೆ ಶುಕ್ರವಾರ ಪ್ರಕಟವಾಗಿದ್ದು, ಆರು ವರ್ಷಗಳ ಕನಿಷ್ಠ ಮಟ್ಟವಾದ ಶೇ 5ಕ್ಕೆ ಇಳಿಕೆಯಾಗಿದೆ. ಈ ಕುರಿತು ಫಿಕ್ಕಿ ಪ್ರತಿಕ್ರಿಯೆ ನೀಡಿದೆ.

ಆರ್ಥಿಕ ಪ್ರಗತಿಯು ಇಳಿಮುಖವಾಗಿರುವುದಕ್ಕೆ ಒಕ್ಕೂಟವು ತೀವ್ರ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ... ಆರ್ಥಿಕ ವೃದ್ಧಿ ದರ ಶೇ 6: ‘ಫಿಕ್ಕಿ’ ಸಮೀಕ್ಷೆ

‘ಜಿಡಿಪಿಯು ನಿರೀಕ್ಷೆಗಿಂತಲೂ ಕಡಿಮೆ ಮಟ್ಟದ ಬೆಳವಣಿಗೆ ಕಂಡಿದೆ’ ಎಂದು ಒಕ್ಕೂಟದ ಅಧ್ಯಕ್ಷ ಸಂದೀಪ್‌ ಸೋಮಾನಿ ಹೇಳಿದ್ದಾರೆ.

‘ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಕೈಗೊಳ್ಳುತ್ತಿರುವುದರಿಂದ ಮುಂದಿನ ತ್ರೈಮಾಸಿಕಗಳಲ್ಲಿ ಆರ್ಥಿಕತೆ ಚೇತರಿಸಿಕೊಳ್ಳುವ ವಿಶ್ವಾಸವಿದೆ’ ಎಂದು ಅವರು ಹೇಳಿದ್ದಾರೆ.

‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಪುನರ್ಧನ, ಹೆಚ್ಚುವರಿ ಸರ್ಚಾರ್ಜ್‌ ಕೈಬಿಟ್ಟಿರುವುದು, ಎಂಎಸ್‌ಎಂಇಗಳಿಗೆ ಬಾಕಿ ಇರುವ ಜಿಎಸ್‌ಟಿ ಮರುಪಾವತಿಯಂತಹ ಪ್ರಮುಖ ಕ್ರಮಗಳಿಂದಾಗಿ ಆರ್ಥಿಕತೆ ಚೇತರಿಸಿಕೊಳ್ಳಲಿದ್ದು, ಸ್ಥಿರತೆ ಸಾಧಿಸಲಿದೆ’ ಎಂದು ಪಿಎಚ್‌ಡಿ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ರಾಜೀವ್‌ ತಲ್ವಾರ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು