ಮುಂಬೈ : ಪಶ್ಚಿಮ ಏಷ್ಯಾ ಸಂಘರ್ಷದಿಂದ ದೇಶದ ರತ್ನ ಮತ್ತು ಆಭರಣಗಳ ರಫ್ತು ಏಪ್ರಿಲ್ ತಿಂಗಳಿನಲ್ಲಿ ಶೇ 9ರಷ್ಟು ಇಳಿಕೆ ಆಗಿದೆ ಎಂದು ರತ್ನ ಮತ್ತು ಆಭರಣ ರಫ್ತು ಉತ್ತೇಜನಾ ಮಂಡಳಿ (ಜಿಜೆಇಪಿಸಿ) ತಿಳಿಸಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ದೇಶದಿಂದ ಒಟ್ಟು ₹20,952 ಕೋಟಿ ಮೌಲ್ಯದ ರತ್ನ ಮತ್ತು ಚಿನ್ನಾಭರಣ ರಫ್ತಾಗಿತ್ತು. ಅದು ಈ ಬಾರಿ ₹20,825 ಕೋಟಿಗೆ ಇಳಿದಿದೆ ಎಂದು ಮಂಡಳಿಯ ಅಧ್ಯಕ್ಷ ಕಿರೀಟ್ ಭನ್ಸಾಲಿ ತಿಳಿಸಿದ್ದಾರೆ.

ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳ ರಫ್ತಿನಲ್ಲಿ ಶೇ 19ರಷ್ಟು ಕಡಿಮೆಯಾಗಿದ್ದು, ₹8,550 ಕೋಟಿ ಆಗಿದೆ. ಪ್ರಯೋಗಾಲಯಗಳಲ್ಲಿ ಅಭಿವೃದ್ಧಿಪಡಿಸಿದ ವಜ್ರಗಳ ರಫ್ತು ಶೇ 15ರಷ್ಟು ಮತ್ತು ಚಿನ್ನಾಭರಣಗಳ ರಫ್ತು ಶೇ 21ರಷ್ಟು ಇಳಿದಿದೆ.

ಆದರೆ ಬೆಳ್ಳಿ ಆಭರಣಗಳ ರಫ್ತಿನಲ್ಲಿ ಶೇ 444ರಷ್ಟು ಏರಿಕೆ ಆಗಿದ್ದು, ₹2,575 ಕೋಟಿಯಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು ₹473 ಕೋಟಿ ಆಗಿತ್ತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.