ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಸಮರ: ಜಾಗತಿಕ ಆರ್ಥಿಕ ಹಿಂಜರಿಕೆ ಆತಂಕ

Last Updated 4 ಜೂನ್ 2019, 7:21 IST
ಅಕ್ಷರ ಗಾತ್ರ

ಲಂಡನ್‌ (ರಾಯಿಟರ್ಸ್‌): ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರ ತೀವ್ರಗೊಂಡಿರುವುದು ಹಾಗೂ ಏಷ್ಯಾ, ಯುರೋಪ್‌ನಲ್ಲಿ ಕೈಗಾರಿಕಾ ಉತ್ಪಾದನೆ ಕುಸಿದಿರುವುದು ಜಾಗತಿಕ ಆರ್ಥಿಕ ಹಿಂಜರಿಕೆ ಕಂಡುಬರುವ ಆತಂಕ ಹೆಚ್ಚಿಸಿವೆ.

ದುಬಾರಿ ವಾಣಿಜ್ಯ ಸುಂಕಗಳು ಜಾಗತಿಕ ವಾಣಿಜ್ಯ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿವೆ. ವಹಿವಾಟು ಮತ್ತು ಗ್ರಾಹಕರ ಬೇಡಿಕೆ ಕುಂದಿಸಿ ಉದ್ಯೋಗ ಅವಕಾಶಗಳು ಕಡಿಮೆಯಾಗಿ ಬಂಡವಾಳ ಹೂಡಿಕೆ ವಿಳಂಬಕ್ಕೆ ಕಾರಣವಾಗಲಿವೆ.

ವಾಣಿಜ್ಯ ಉದ್ವಿಗ್ನತೆ ಶಮನಗೊಳ್ಳದಿದ್ದರೆ ಜಾಗತಿಕ ಆರ್ಥಿಕತೆಯು ಹಿಂಜರಿಕೆ ಕಾಣುವ ಸಾಧ್ಯತೆ ಇದೆ ಎಂದು ಕೆಲ ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಅಮೆರಿಕ ಮತ್ತು ಚೀನಾ ಮಧ್ಯೆ ಉದ್ಭವಿಸಿದ ಬಿಕ್ಕಟ್ಟು, ವಾಹನಗಳ ಬೇಡಿಕೆ ಕುಸಿತ, ಬ್ರೆಕ್ಸಿಟ್‌ ವಿವಾದ ಮತ್ತು ವಿವಿಧ ದೇಶಗಳಲ್ಲಿನ ರಾಜಕೀಯ ಅನಿಶ್ಚಿತತೆಯು ಯುರೋಪ್‌ನಲ್ಲಿ ಕಳೆದ ತಿಂಗಳು ತಯಾರಿಕಾ ಚಟುವಟಿಕೆ ಕುಸಿತಕ್ಕೆ ಕಾರಣವಾಗಿವೆ.

ಹೆಚ್ಚಿದ ವಾಣಿಜ್ಯ ಉದ್ವಿಗ್ನತೆ: ಚೀನಾದ ಕೆಲ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ 10ರಿಂದ ಶೇ 25ಕ್ಕೆ ಹೆಚ್ಚಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧಾರವು ಎರಡೂ ದೇಶಗಳ ನಡುವಣ ವಾಣಿಜ್ಯ ಸಮರದ ತೀವ್ರತೆ ಹೆಚ್ಚಿಸಿದೆ.

‘ಚೀನಾ ಪ್ರತೀಕಾರ ಕ್ರಮ ಕೈಗೊಂಡರೆ ಮುಂದಿನ 9 ತಿಂಗಳಲ್ಲಿ ಜಾಗತಿಕ ಆರ್ಥಿಕ ಹಿಂಜರಿಕೆ ಕಂಡುಬರುವ ಸಾಧ್ಯತೆ ಇದೆ’ ಎಂದು ಅಮೆರಿಕದ ಹಣಕಾಸು ಸೇವಾ ಸಂಸ್ಥೆ ಮೊರ್ಗನ್‌ ಸ್ಟ್ಯಾನ್ಲೆದ ಮುಖ್ಯ ಆರ್ಥಿಕತಜ್ಞ ಚೇತನ್‌ ಆಹ್ಯಾ ಹೇಳಿದ್ದಾರೆ.

ಮೆಕ್ಸಿಕೊ ವಿರುದ್ಧ ಹೊಸ ಸುಂಕ ವಿಧಿಸುವ ಅಮೆರಿಕದ ಬೆದರಿಕೆಯೂ ಜಾಗತಿಕ ಆರ್ಥಿಕ ಹಿಂಜರಿಕೆಯ
ಭೀತಿಗೆ ಇಂಬು ನೀಡಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT