ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತು ನಿಷೇಧ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆ

Last Updated 16 ಮೇ 2022, 12:15 IST
ಅಕ್ಷರ ಗಾತ್ರ

ಪ್ಯಾರಿಸ್: ಭಾರತವು ರಫ್ತು ನಿಷೇಧಿಸಿದ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.

ಯುರೋಪ್ ಮಾರುಕಟ್ಟೆ ಸೋಮವಾರ ಬೆಳಿಗ್ಗೆ ವಹಿವಾಟು ಆರಂಭಿಸಿದಾಗ ಪ್ರತಿ ಟನ್ ಗೋಧಿ ಬೆಲೆ 435 ಯುರೋಗೆ (ಅಂದಾಜು ₹35,314.17) ಹೆಚ್ಚಳವಾಗಿದೆ.

ಫೆಬ್ರುವರಿಯಲ್ಲಿ ಉಕ್ರೇನ್‌ನ ಕೃಷಿ ಪವರ್‌ಹೌಸ್ ಮೇಲೆ ರಷ್ಯಾ ಅತಿಕ್ರಮಣ ನಡೆಸಿದ ಬಳಿಕ ಪೂರೈಕೆಗೆ ಅಡ್ಡಿ ಭೀತಿಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿ ದರ ಹೆಚ್ಚಳವಾಗಲು ಆರಂಭವಾಗಿತ್ತು. ಈ ಹಿಂದೆ ಜಾಗತಿಕ ಗೋಧಿ ರಫ್ತಿನಲ್ಲಿ ಉಕ್ರೇನ್ ಪಾಲು ಶೇ 12ರಷ್ಟಿದ್ದರೆ, ರಷ್ಯಾದ ಪಾಲು ಶೇ 22ಕ್ಕೂ ಹೆಚ್ಚು ಇತ್ತು. ಈ ಎರಡೂ ದೇಶಗಳಿಂದ ಫೆಬ್ರುವರಿ 24ರಿಂದ ಗೋಧಿ ರಫ್ತು ಆಗಿಲ್ಲ.

ಉಕ್ರೇನ್ ಮೇಲೆ ಅತಿಕ್ರಮಣ ಆರಂಭಿಸಿದ ಬಳಿಕ ಕಪ್ಪು ಸಮುದ್ರ ಮಾರ್ಗವಾಗಿ ಗೋಧಿ ಪೂರೈಕೆ ಕಡಿಮೆಯಾಗಿತ್ತು. ಇದರ ಬೆನ್ನಲ್ಲೇ ಜಾಗತಿಕ ಖರೀದಿದಾರರು ಭಾರತದತ್ತ ಮುಗಿಬಿದ್ದಿದ್ದರು.

ದೇಶದಲ್ಲಿ ದರ ಏರಿಕೆ ತಡೆಯುವುದಕ್ಕಾಗಿ ಮತ್ತು ಬಿಸಿ ಗಾಳಿಯಿಂದ ಇಳುವರಿಗೆ ಹೊಡೆತ ಬಿದ್ದಿರುವ ಕಾರಣ ಭಾರತ ಶುಕ್ರವಾರ ಗೋಧಿ ರಫ್ತು ನಿಷೇಧಿಸಿತ್ತು. ಭಾರತವು ವಿಶ್ವದ ಎರಡನೇ ಅತಿದೊಡ್ಡ ಗೋಧಿ ಉತ್ಪಾದಕ ರಾಷ್ಟ್ರವಾಗಿದ್ದು,ಜಾಗತಿಕ ರಫ್ತಿನಲ್ಲಿಶೇ 22ಕ್ಕೂ ಹೆಚ್ಚು ಪಾಲು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT