ಸೋಮವಾರ, ಮಾರ್ಚ್ 8, 2021
31 °C

ಚಿನ್ನದ ಬಾಂಡ್‌ ದರ ನಿಗದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸೋಮವಾರದಿಂದ ಖರೀದಿಗೆ ಲಭ್ಯವಾಗಲಿರುವ ಚಿನ್ನದ ಬಾಂಡ್‌ ನೀಡಿಕೆ ಬೆಲೆಯನ್ನು ಪ್ರತಿ ಗ್ರಾಂಗೆ ₹ 3,443ರಂತೆ ನಿಗದಿ ಮಾಡಲಾಗಿದೆ.

ಆನ್‌ಲೈನ್‌ ಮತ್ತು ಡಿಜಿಟಲ್‌ ರೂಪದಲ್ಲಿ ಹಣ ಪಾವತಿಸುವವರಿಗೆ ಪ್ರತಿ ಗ್ರಾಂಗೆ ₹ 50ರಂತೆ ವಿನಾಯ್ತಿ ನೀಡಲು ಆರ್‌ಬಿಐ ನಿರ್ಧರಿಸಿದೆ. ಇದರಿಂದ ಪ್ರತಿ ಗ್ರಾಂ ನೀಡಿಕೆ ಬೆಲೆ ₹ 3,393ರಷ್ಟಾಗಲಿದೆ.

ಯೋಜನೆಯ ವಿವರ: ಈ ಯೋಜನೆಯಡಿ ಬಾಂಡ್‌ಗಳನ್ನು ಕನಿಷ್ಠ ಒಂದು ಗ್ರಾಂನಿಂದ ಗರಿಷ್ಠ 500 ಗ್ರಾಂ ಚಿನ್ನದ ರೂಪದಲ್ಲಿ ನೀಡಲಾಗುವುದು. ಹೂಡಿಕೆ ಮಿತಿ ಕನಿಷ್ಠ 1 ಗ್ರಾಂ. ಒಂದು ಹಣಕಾಸು ವರ್ಷದಲ್ಲಿ ವ್ಯಕ್ತಿಯೊಬ್ಬ ಗರಿಷ್ಠ 4 ಕೆ.ಜಿ ಮತ್ತು ಟ್ರಸ್ಟ್‌ಗಳಿಗೆ 20 ಕೆ.ಜಿವರೆಗೆ ಖರೀದಿ ಮಿತಿ ನಿಗದಿಪಡಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು