ಭಾನುವಾರ, ಏಪ್ರಿಲ್ 18, 2021
29 °C

ಚಿನ್ನದ ಬಾಂಡ್‌ ವೇಳಾಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಚಿನ್ನದ ಬಾಂಡ್‌ (ಎಸ್‌ಜಿಬಿ) ನೀಡಿಕೆಯ ವೇಳಾ
ಪಟ್ಟಿಯನ್ನು ಆರ್‌ಬಿಐ ಪ್ರಕಟಿಸಿದೆ.

ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಪ್ರತಿ ತಿಂಗಳೂ ಬಾಂಡ್‌ಗಳನ್ನು ನೀಡಲಾಗುವುದು. 2019–20ನೇ ಹಣಕಾಸು ವರ್ಷದ ಮೊದಲ ಕಂತು (ಸರಣಿ –1) ಜೂನ್‌ 3 ಮತ್ತು ‘ಸರಣಿ –2’ ಜುಲೈ 8ರಿಂದ ಖರೀದಿಗೆ ಲಭ್ಯ ಇರಲಿವೆ. ‘ಸರಣಿ–3’ ಮತ್ತು ‘ಸರಣಿ–4’ ಬಾಂಡ್‌ಗಳನ್ನು, ಕ್ರಮವಾಗಿ ಆಗಸ್ಟ್‌ 5 ಮತ್ತು ಸೆಪ್ಟೆಂಬರ್‌ 9ರಿಂದ ನೀಡಲಾಗುವುದು.

ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಮತ್ತು ಪೇಮೆಂಟ್ಸ್‌ ಬ್ಯಾಂಕ್‌ ಹೊರತುಪಡಿಸಿದ ವಾಣಿಜ್ಯ ಬ್ಯಾಂಕ್‌ಗಳು, ಆಯ್ದ ಅಂಚೆ ಕಚೇರಿಗಳು, ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ, ರಾಷ್ಟ್ರೀಯ ಮತ್ತು ಮುಂಬೈ ಷೇರುಪೇಟೆಗಳಲ್ಲಿ ಈ ಬಾಂಡ್‌ಗಳನ್ನು ಮಾರಾಟ ಮಾಡಲಾಗುವುದು.

ಭೌತಿಕ ರೂಪದ ಚಿನ್ನದ ಬೇಡಿಕೆ ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2015ರ ನವೆಂಬರ್‌ನಲ್ಲಿ ಯೋಜನೆ ಜಾರಿಗೆ ತಂದಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು