ನವದೆಹಲಿ: ದೇಶೀಯ ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಳದಿಂದಾಗಿ ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿ ಧಾರಣೆಯು ಏರಿಕೆಯಾಗಿದೆ.
10 ಗ್ರಾಂ ಚಿನ್ನಕ್ಕೆ ₹550 ಹೆಚ್ಚಳವಾಗಿದ್ದು, ₹74,350ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹1,200 ಏರಿಕೆಯಾಗಿದ್ದು, ₹88,200ಕ್ಕೆ ಮುಟ್ಟಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,543 ಡಾಲರ್ (ಅಂದಾಜು ₹2.13 ಲಕ್ಷ) ಮತ್ತು 30.34 ಡಾಲರ್‌ನಂತೆ (ಅಂದಾಜು ₹2,546) ಮಾರಾಟವಾಗಿದೆ.