ಮಂಗಳವಾರ, ಅಕ್ಟೋಬರ್ 15, 2019
29 °C

ಚಿನ್ನದ ಇಟಿಎಫ್‌ ₹ 44 ಕೋಟಿ ಬಂಡವಾಳ ಹೂಡಿಕೆ

Published:
Updated:
Prajavani

ನವದೆಹಲಿ: ಚಿನ್ನದ ವಿನಿಮಯ ವಹಿವಾಟು ನಿಧಿಯು (ಇಟಿಎಫ್‌) ಸೆಪ್ಟೆಂಬರ್‌ನಲ್ಲಿ ₹ 44 ಕೋಟಿಗಳಷ್ಟು ಬಂಡವಾಳ ಆಕರ್ಷಿಸಿದೆ ಎಂದು ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಒಕ್ಕೂಟವು (ಎಎಂಎಫ್‌ಐ) ಮಾಹಿತಿ ನೀಡಿದೆ.

ಈ ವರ್ಷದಲ್ಲಿ ಇದು ಎರಡನೇ ಬಾರಿಗೆ ಬಂಡವಾಳ ಹೂಡಿಕೆಯಾದಂತಾಗಿದೆ. ಆಗಸ್ಟ್‌ನಲ್ಲಿ ₹145 ಕೋಟಿ ಹೂಡಿಕೆಯಾಗಿತ್ತು. 2018ರ ನವೆಂಬರ್‌ನಲ್ಲಿ ₹10 ಕೋಟಿ ಹೂಡಿಕೆಯಾಗಿತ್ತು.

ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿ ಇರುವುದು ಮತ್ತು ರೂಪಾಯಿ ಮೌಲ್ಯದಲ್ಲಿ ಆಗುತ್ತಿರುವ ಇಳಿಕೆಯಿಂದಾಗಿ ಹೂಡಿಕೆಯ ಸುರಕ್ಷಿತ ಸ್ವರ್ಗವಾಗಿರುವ ಚಿನ್ನದ ಬಗ್ಗೆ ಹೂಡಿಕೆದಾರರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಏಪ್ರಿಲ್‌ನಿಂದ ಚಿನ್ನದ ‘ಇಟಿಎಫ್‌’ನ ನಿರ್ವಹಣಾ ಸಂಪತ್ತಿನಲ್ಲಿ ಏರಿಕೆಯಾಗುತ್ತಿದೆ. ಅಮೆರಿಕ–ಚೀನಾ ವಾಣಿಜ್ಯ ಸಮರವು ಬಾಂಡ್‌ ಗಳಿಕೆಯನ್ನು ತಗ್ಗಿಸುತ್ತಿದ್ದು, ಚಿನ್ನದ ಮೇಲಿನ ಹೂಡಿಕೆಯನ್ನು ಹೆಚ್ಚಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

Post Comments (+)