ಸೋಮವಾರ, ಜೂನ್ 21, 2021
29 °C

ಏಪ್ರಿಲ್‌ನಲ್ಲಿ ₹ 46,620 ಕೋಟಿ ಮೌಲ್ಯದ ಚಿನ್ನ ಆಮದು

ಪಿಟಿಐ Updated:

ಅಕ್ಷರ ಗಾತ್ರ : | |

ಚಿನ್ನ– ಸಾಂದರ್ಭಿಕ ಚಿತ್ರ

ನವದೆಹಲಿ: ಚಿನ್ನದ ಆಮದು ಮೌಲ್ಯವು 2020ರ ಏಪ್ರಿಲ್‌ನಲ್ಲಿ ₹ 21.61 ಕೋಟಿ ಇದ್ದಿದ್ದು 2021ರ ಏಪ್ರಿಲ್‌ನಲ್ಲಿ ₹ 46,620 ಕೋಟಿಗಳಿಗೆ ಏರಿಕೆ ಕಂಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ಚಿನ್ನಕ್ಕೆ ದೇಶಿ ಬೇಡಿಕೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಸಚಿವಾಲಯ ತಿಳಿಸಿದೆ. ಚಿನ್ನದ ಆಮದು ಹೆಚ್ಚಳದಿಂದಾಗಿ ಚಾಲ್ತಿ ಖಾತೆ ಕೊರತೆ ಅಂತರವು ₹ 50,024 ಕೋಟಿಗಳಿಂದ ₹ 1.17 ಲಕ್ಷ ಕೋಟಿಗೆ ಏರಿದೆ.

ಬೆಳ್ಳಿ ಆಮದು ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್‌ನಲ್ಲಿ ಶೇ 88.53ರಷ್ಟು ಇಳಿಕೆ ಆಗಿದೆ.

ಕೋವಿಡ್–19 ಸಾಂಕ್ರಾಮಿಕದ ಎರಡನೇ ಅಲೆಯ ಕಾರಣದಿಂದಾಗಿ ಮುಂಬರುವ ತಿಂಗಳುಗಳಲ್ಲಿ ಚಿನ್ನದ ಬೇಡಿಕೆಯ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಉದ್ಯಮ ವಲಯದ ತಜ್ಞರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು