ಸೋಮವಾರ, ಡಿಸೆಂಬರ್ 16, 2019
25 °C

ಏರುತ್ತಿದೆ ಚಿನ್ನ ದರ; 10 ಗ್ರಾಂಗೆ ₹332 ಹೆಚ್ಚಳ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಚಿನ್ನದ ಆಭರಣ

ನವದೆಹಲಿ: ದೇಶದಲ್ಲಿ ಚಿನ್ನದ ದರ ₹332 ಜಿಗಿತ ಕಂಡಿದ್ದು, 10 ಗ್ರಾಂಗೆ ₹39,299 ತಲುಪಿದೆ. ಎಚ್‌ಡಿಎಫ್‌ ಸೆಕ್ಯುರಿಟೀಸ್ ಪ್ರಕಾರ, ಜಾಗತಿಕ ಮಟ್ಟದಲ್ಲಿ ಸಕಾರಾತ್ಮಕ ಸೂಚನೆಗಳ ಬೆನ್ನಲೇ ಚಿನ್ನ ದರ ಏರಿಕೆಯಾಗಿದೆ. 

ಕಳೆದ ವಹಿವಾಟಿನಲ್ಲಿ 10 ಗ್ರಾಂ ಚಿನ್ನ ₹38,967ರಲ್ಲಿ ಮುಕ್ತಾಯಗೊಂಡಿತ್ತು.

ಇದನ್ನೂ ಓದಿ: ಏರುತ್ತಲೇ ಇದೆ ಚಿನ್ನ ದರ: ಖರೀದಿಗೆ ಇದು ಸಕಾಲ

ಬುಧವಾರ ಬೆಳಿಗ್ಗೆ ಡಾಲರ್‌ ಎದುರು ರೂಪಾಯಿ ಮೌಲ್ಯ 12 ಪೈಸೆ ಕುಸಿಯುವ ಮೂಲಕ ₹71.78ರಲ್ಲಿ ವಹಿವಾಟು ನಡೆಯಿತು. ಚಿನ್ನ ಖರೀದಿಯಲ್ಲೂ ಹೆಚ್ಚಳ ಕಂಡಿದ್ದರಿಂದ 24 ಕ್ಯಾರೆಟ್‌ನ 10 ಗ್ರಾಂ ಚಿನ್ನ ದರ ದೆಹಲಿಯಲ್ಲಿ ₹332 ಹೆಚ್ಚಿತು. ಬೆಳ್ಳಿ ದರ ಪ್ರತಿ ಕೆ.ಜಿಗೆ ₹676 ಜಿಗಿಯುವ ಮೂಲಕ ₹46,672 ಮುಟ್ಟಿತು. ಕಳೆದ ವಹಿವಾಟಿನಲ್ಲಿ ₹45,996ಕ್ಕೆ ಮುಕ್ತಾಯಗೊಂಡಿತ್ತು. 

ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ (28.34 ಗ್ರಾಂ) ಚಿನ್ನ 1,483 ಅಮೆರಿಕನ್‌ ಡಾಲರ್‌ನಲ್ಲಿ ವಹಿವಾಟು ಕಂಡಿದೆ, ಬೆಳ್ಳಿ ಪ್ರತಿ ಔನ್ಸ್‌ಗೆ 17.27 ಅಮೆರಿಕನ್‌ ಡಾಲರ್‌ ಆಗಿದೆ. 

ಪ್ರತಿಕ್ರಿಯಿಸಿ (+)