ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ದರದಲ್ಲಿ ಸಾರ್ವಕಾಲಿಕ ಏರಿಕೆ; ಬೆಳ್ಳಿಯೂ ಹೆಚ್ಚಳ

Last Updated 20 ಮಾರ್ಚ್ 2023, 13:06 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಳವಾದ ಕಾರಣ ಸೋಮವಾರದಂದು ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹1,400ರಷ್ಟು ಹೆಚ್ಚಳವಾಗಿದೆ. ಹೀಗಾಗಿ, 10 ಗ್ರಾಂ ಚಿನ್ನದ ಬೆಲೆ ₹60,100ಕ್ಕೆ ಜಿಗಿದಿದ್ದು, ಇದು ಸಾರ್ವಕಾಲಿಕ ಏರಿಕೆಯಾಗಿದೆ.

ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹದ ಬೆಲೆ 10ಗ್ರಾಂಗೆ ₹58,700ರಷ್ಟಿತ್ತು.

ಇದಲ್ಲದೇ ಬೆಳ್ಳಿಯೂ ಕೂಡ ₹ 1,860 ರಷ್ಟು ಹೆಚ್ಚಳ ಕಾಣುವುದರ ಮೂಲಕ ಕೆ.ಜಿ.ಗೆ ₹ 69,340ಕ್ಕೆ ತಲುಪಿದೆ.

‘ಜಾಗತಿಕವಾಗಿ ಬ್ಯಾಂಕಿಂಗ್ ಕ್ಷೇತ್ರದ ಬಿಕ್ಕಟ್ಟಿನಿಂದ ಚಿನ್ನ ಸಾರ್ವಕಾಲಿಕ ಏರಿಕೆ ಕಂಡಿದ್ದು, ಈ ವಿದ್ಯಮಾನ ಇನ್ನೂ ಮುಂದುವರಿಯಲಿದೆ. ಇನ್ನೊಂದೆಡೆ ಹಣದುಬ್ಬರದ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿರುವುದು ಹೆಚ್ಚಳಕ್ಕೆ ಕಾರಣ‘ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT