ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಬೆಲೆ ಏರಿಕೆ

Last Updated 19 ನವೆಂಬರ್ 2019, 18:53 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ಪೇಟೆಯಲ್ಲಿ ಬೆಲೆ ಹೆಚ್ಚಳದ ಕಾರಣಕ್ಕೆ ದೇಶಿ ಚಿನಿವಾರ ಪೇಟೆಯಲ್ಲಿಯೂ ಮಂಗಳವಾರ ಚಿನ್ನದ ಬೆಲೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂಗಳಿಗೆ ₹ 171ರಂತೆ ಏರಿಕೆಯಾಗಿ ₹ 38,271ಕ್ಕೆ, ಮುಂಬೈನಲ್ಲಿ ₹ 125ರಂತೆ ಹೆಚ್ಚಳಗೊಂಡು ₹ 38,071ಕ್ಕೆ ತಲುಪಿದೆ. ದೆಹಲಿಯಲ್ಲಿ ₹ 328ರಂತೆ (₹ 39,028) ಏರಿಕೆಯಾಗಿದೆ.

ಪತಂಜಲಿ ವರಮಾನ₹ 3,562 ಕೋಟಿ

ನವದೆಹಲಿ: ಬಾಬಾ ರಾಮದೇವ್‌ ಒಡೆತನದ ಪತಂಜಲಿ ಆಯುರ್ವೇದ, ಏಪ್ರಿಲ್‌ – ಸೆಪ್ಟೆಂಬರ್‌ ಅವಧಿಯಲ್ಲಿ ₹ 3,562 ಕೋಟಿ ವರಮಾನ ಗಳಿಸಿದೆ.

ಕಂಪನಿಯ ಇದುವರೆಗಿನ ಹಣಕಾಸು ವರ್ಷಗಳ ಮೊದಲಾರ್ಧದಲ್ಲಿನ ಗರಿಷ್ಠ ವರಮಾನ ಇದಾಗಿದೆ. ವರ್ಷದ ಹಿಂದಿನ ಅರ್ಧವಾರ್ಷಿಕ ವರಮಾನವು ₹ 2,513 ಕೋಟಿಗಳಷ್ಟಿತ್ತು. ಕಂಪನಿಯು ನಿವ್ವಳ ಲಾಭದ ವಿವರ ಪ್ರಕಟಿಸಿಲ್ಲ. ಪತಂಜಲಿ ಆಯುರ್ವೇದ ಈಗ ಮತ್ತೆ ವಹಿವಾಟು ಹೆಚ್ಚಳದ ಹಾದಿಗೆ ಮರಳಿದೆ ಎಂದು ಸಂಸ್ಥೆಯ ವಕ್ತಾರ ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT