ಬೆಂಗಳೂರು: ಚಿನ್ನಾಭರಣ ಪ್ರಿಯರಿಗೆ ಕಳೆದ ಒಂದು ವಾರದಿಂದ ಖುಷಿ ಸಮಾಚಾರಗಳು ಸಿಗುತ್ತಿವೆ. ಇಂದು ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ.

ವಿವಿಧ ಕಾರಣಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಚಿನ್ನದ ದರದಲ್ಲಿ ಇಳಿಕೆಯಾಗಿದೆ. ಇದರಿಂದ ಭಾರತದಲ್ಲೂ ಚಿನ್ನದ ದರ ಇಳಿಕೆ ಕಂಡಿದೆ.

ಬೆಂಗಳೂರಿನಲ್ಲಿ ಇಂದು ಒಂದು ಗ್ರಾಂ ಚಿನ್ನದ ದರಕ್ಕೆ (22 ಕ್ಯಾರಟ್) ₹ 270 ಕಡಿಮೆಯಾಗಿ ₹12,865 ಕ್ಕೆ ಮಾರಾಟವಾಗುತ್ತಿದೆ. 24 ಕ್ಯಾರಟ್ ಚಿನ್ನಕ್ಕೆ ₹291 ಕಡಿಮೆಯಾಗಿ ₹14,035 ಕ್ಕೆ ಮಾರಾಟವಾಗುತ್ತಿದೆ.

ಬೆಂಗಳೂರಿನಲ್ಲಿ 10 ಗ್ರಾಂ ಇಂದಿನ ಚಿನ್ನದ ಬೆಲೆ ₹1,28,650 (22 ಕ್ಯಾರಟ್). 24 ಕ್ಯಾರಟ್ ಚಿನ್ನ ₹1,40,350 ಕ್ಕೆ ದೊರೆಯುತ್ತಿದೆ. ಇದು ಮಾರ್ಚ್ 24ರ ಮಧ್ಯಾಹ್ನ 1 ಗಂಟೆವರೆಗಿನ ಬೆಲೆಯಾಗಿದೆ.

ಈ ತಿಂಗಳಿನಲ್ಲೇ ಇದು ಅತಿ ಕಡಿಮೆ ಚಿನ್ನದ ಬೆಲೆಯಾಗಿದೆ. ಅಮೆರಿಕದ ಪೆಢರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದು ಹಾಗೂ ಇರಾನ್-ಇಸ್ರೇಲ್ ಸಂಘರ್ಷದಿಂದ ಕಚ್ಚಾ ತೈಲ ಬೆಲೆಯಲ್ಲಿ ಹೆಚ್ಚಳವಾಗಿರುವುದು ಮತ್ತು ಹೂಡಿಕೆದಾರರು ಚಿತ್ತ ಬೇರೆ ಕಡೆ ಹರಿಸಿರುವುದು ಚಿನ್ನದ ದರದಲ್ಲಿ ಗಣನೀಯ ಕಡಿಮೆ ಆಗಲು ಕಾರಣ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.