ನವದೆಹಲಿ: ಕೇಂದ್ರ ಸರ್ಕಾರವು ಅಮೂಲ್ಯ ಲೋಹಗಳ ಆಮದು ಮೇಲಿನ ಸುಂಕವನ್ನು ಹೆಚ್ಚಿಸಿದ ಪರಿಣಾಮ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಬುಧವಾರ ಭಾರಿ ಏರಿಕೆಯಾಗಿದೆ.

ಶೇ 99.9ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ದರವು ₹8,550 ಹೆಚ್ಚಳವಾಗಿದ್ದು, ₹1,65,350ಕ್ಕೆ ತಲುಪಿದೆ. ₹20,500 ಜಿಗಿತದೊಂದಿಗೆ ಒಂದು ಕೆ.ಜಿ. ಬೆಳ್ಳಿ ದರವು ₹2,97,500ರಷ್ಟಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಪಶ್ಚಿಮ ಏಷ್ಯಾದಲ್ಲಿ ತಲೆದೋರಿರುವ ಬಿಕಟ್ಟಿನ ನಡುವೆ ಬೆಲೆ ಏರಿಕೆ ಹಾಗೂ ಅನಗತ್ಯ ಖರೀದಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ಚಿನ್ನ ಮತ್ತು ಬೆಳ್ಳಿ ಆಮದು ಸುಂಕವನ್ನು ಶೇ 6ರಿಂದ ಶೇ 15ರಷ್ಟಕ್ಕೆ ಹೆಚ್ಚಿಸಿತ್ತು.

ಪ್ಲಾಟಿನಂ ಮೇಲಿನ ಆಮದು ಸುಂಕವನ್ನೂ ಶೇ 6.4ರಿಂದ 15.4ಕ್ಕೆ ಏರಿಸಲಾಗಿದೆ. ಪರಿಷ್ಕೃತ ಸುಂಕವು ಬುಧವಾರದಿಂದಲೇ ಜಾರಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.